ನನ್ನಾಸೆ.....

ನನ್ನಾಸೆ......
ಬಾನಿನಲಿ ಚುಕ್ಕಿಯಾಗುವ ಆಸೆ
ಬೆಳದಿಂಗಳ ಬಾಲೆಯಾಗುವ ಆಸೆ
ಹರಿಯುವ ನದಿಯಾಗುವ ಆಸೆ
ಬಾನಾಡಿಗಳ ಕಲರವ ಕೇಳುವಾಸೆ

ಶರಧಿಯೊಳು ಮುತ್ತಾಗುವ ಆಸೆ
ಕಾನನದಿ ಜಿಂಕೆಯಾಗುವ ಆಸೆ
ಕನಸಲ್ಲಿ ಅಪ್ಸರೆಯಾಗುವ ಆಸೆ ಕೊಳದಲ್ಲಿನ ನೈದಿಲೆಯಾಗುವಾಸೆ

ಭುವಿಯಲ್ಲಿ ದೇವತೆಯಾಗುವ ಆಸೆ
ಹೂವಿನ ಮಕರಂದವ ಹೀರುವಾಸೆ
ಮುಗ್ದ ಮನಸಿನ ಮಗುವಾಗುವಾಸೆ
ಆಗಸದಿ ಚಿತ್ತಾರ ಬಿಡಿಸುವ ಆಸೆ

ಆಸೆಗಳಿಗೆ ಕೊನೆಯಿಲ್ಲ
ಆಸೆಗಳಿಗೆ ಮಿತಿಯಿಲ್ಲ
ಆಸೆಗಳಿರಬೇಕು
ಬದುಕು ಬಂಗಾರವಾಗಬೇಕು

- sabitha

02 Dec 2020, 10:15 pm
Download App from Playstore: