ಪಾನಿಪುರಿ.......
ಪಾನಿಪುರಿ
ರಸ್ತೆಬದಿಯ ಪಾನಿಪುರಿ
ಎಲ್ಲರಿಗೂ ಅಚ್ಚುಮೆಚ್ಚು
ಕೈಗೆಟುಕುವ ಬೆಲೆಯಲ್ಲಿ
ಸವಿಯುವೆವು ಖುಷಿಯಲ್ಲಿ
ಮೇಲುಕೀಳೆಂಬ ಭೇದವಿಲ್ಲ
ಜಾತಿಮತಗಳ ಅಂತರವಿಲ್ಲ
ಶ್ರೀಮಂತರೂ ಬರುವರು
ಪಾನಿಪುರಿಯ ಸವಿಯಲು
ಬಾಯ ಚಪಲ ತೀರಿಸಲು
ನಿಂತುಕೊಂಡೆ ತಿನ್ನುವರು
ಮೂಗಿನಿಂದ ನೀರು ಸುರಿಸಿ
ಚಪ್ಪರಿಸುತ ನೀರು ಕುಡಿವರು
ಫೈವ್ಸ್ಟಾರ್ ಹೋಟೆಲ್ ಇರಲಿ
ತ್ರೀಸ್ಟಾರ್ ಹೋಟೆಲ್ ಇರಲಿ
ತಾಜ್ ಹೋಟೆಲೇ ಆಗಿರಲಿ
ಇಂತಹ ಸ್ವಾದಿಷ್ಟ ಸಿಗದು ನೋಡ
ಎಲ್ಲ ಅಂತರಗಳ ಮರೆಸಿ
ಭೇದ ಬಾವಗಳ ಅಳಿಸಿ
ಒಂದುಗೂಡಿ ಸ್ವಾದಿಸುವ
ಏಕೈಕ ಭಕ್ಷ್ಯ ನಮ್ಮ ಪಾನಿಪುರಿ
ಸಮುಖ
- sabitha
03 Dec 2020, 12:14 pm
Download App from Playstore: