ನೆನಪಿರಲಿ

ಬರಬೇಡಿ ಬರಬೇಡಿ
ಸಂವಿಧಾನದ ತಂಟೆ
ಸುದ್ದಿಗೆ ಬರಬೇಡಿ
ಕೆಣಕಬೇಡಿ ಕೆಣಕಬೇಡಿ
ಮಾದ ಗಜಗಳ ಕೆಣಕಿ
ಧೂಳಿಪಟವಾಗಬೇಡಿ
ಸುಮ್ಮ್ ಸುಮ್ಮನೆ
ಕಾಲು ಕೆರೆದು ಬಂದರೆ
ಬಡಿದಪ್ಪಳಿಸುವುದು
ಮಾದ ಗಜಗಳ ಬರಸಿಡಿಲು
ಎಚ್ಚರ ಎಚ್ಚರವಿರಲಿ
ಸಂವಿಧಾನ ಮುಟ್ಟುವ
ಮನುವಾದಿಗಳಿಗೆ
ಸಿಂಹ ಸ್ವಪ್ನದ ಭಯವಿರಲಿ
ಭೀಮ ಘರ್ಜನೆಯ
ನೆನಪಿರಲಿ ನೆನಪಿರಲಿ
*********ರಾಜು ಹಾಸನ********

- ರಾಜು ಹಾಸನ

03 Dec 2020, 01:35 pm
Download App from Playstore: