ಹಳ್ಳಿ ಹಬ್ಬ
ಇದು ಏನು ದೇವರು
ಇದು ಎಂತಾ ದೇವರು
ಹಣ್ಣು ಕಾಯಿ
ಮುರಿದು ಹೊಡೆದು
ಕೊಟ್ಟರು ತಿನ್ನದ
ಮೂಸಿ ನೋಡದ ದೇವರು
ಕುರಿ ಕೋಳಿ ಹಂದಿ
ಎಮ್ಮೆಯ ಬಲಿ ಕೊಟ್ಟರೆ
ಕುಡಿದು ತಿನ್ನುವುದೇ
ಕುರಿ ಕೋಳಿ ಹಂದಿ
ಎಮ್ಮೆಯ ಮಾಂಸರಕ್ತ
ಕೂಗಿ ಗೋಗರೆದು
ಬೆಂಕಿ ಕೆಂಡವಾ
ತುಳಿದು ನೆಡೆದರು
ಗುಡಿಯ ಸುತ್ತ
ಬಿದ್ದು ಹೊರಳಾಡಿ
ತಲೆ ಚಚ್ಚಿ ಬೇಡಿದರು
ಬಾರದ ದೇವರು
ತಮಟೆ ಪೀಪಿ ಸದ್ದಿಗೆ
ವಾಲಾಡಿ ತೇಲಾಡಿ
ಕುಣಿದು ಕುಪ್ಪಳಿಸಿ
ಬೊಬ್ಬೆ ಹೊಡೆದು
ಕೇಕೆ ಹಾಕಿ ಬರುವುದು
ಜನರ ಮೈ ಮೇಲೆ
ಇದು ಏನು ದೇವರು
ಇದು ಎಂತಾ ದೇವರು
*******ರಾಜು ಹಾಸನ*******
- ರಾಜು ಹಾಸನ
03 Dec 2020, 11:35 pm
Download App from Playstore: