ಅಂಚೆ ಪೆಟ್ಟಿಗೆ
ಕಾಲ ಕಾಲಕ್ಕೆ ಸುದ್ದಿಯ ಕೊಡುತ್ತಲಿ
ತನ್ನೊಳಗೆ ಒಂದು ರಹಸ್ಯವ ಹೊತ್ತು
ದೂರದ ತಂದೆ ತಾಯಿಗೆ ನೆನಪಿಸಿದೆ
ಸ್ನೇಹ ಪ್ರೀತಿಯ ಓಲೆಯ ಒದಗಿಸಿದೆ
ಹಳ್ಳಿಯ ಜನರಿಗೆ ದೇವರೆ ನೀ ಆಗಿ
ರೈತನ ಜೊತೆಗೆ ನಿನ್ನಯ ಪೂಜಿಸಿ
ಮಳೆ ಚಳಿ ಬಿಸಿಲು ಗಾಳಿಗೆ ಹೆದರದೆ
ಮೈಯ್ಯನು ಒಡ್ಡಿ ಹೆದರದೆ ನಿಂತೆ
ಜನನ ಹಬ್ಬ ಹರಿದಿನಗಳ ತಿಳಿಸುತ್ತಾ
ಕಥೆ ಕವನ ಪುಸ್ತಕಗಳ ಒದಗಿಸುತ್ತಾ
ಪತ್ರಿಕೆ ಕಾಂಚಾಣ ಜನರಿಗೆ ನೀಡುತ್ತಾ
ಜಗದಲಿ ನೀನೆ ಮಹಾನಾಯಕ ನಾದೆ
ವೃದ್ದರಿಗೆಲ್ಲ ಪಿಂಚಣಿ ಒದಗಿಸುತ್ತಾ
ಅಂಗವಿಕಲರಿಗೆ ಜೀವನ ನೀಡುತ್ತಾ
ವಿಧವೆಯರ ಬಾಳಿಗೆ ದೀಪವು ಆದೆ
ಆಶಾಜ್ಯೋತಿ ಯೆ ಆಗಿರುವೆ ನೀನು
ಕೇಸರಿ ಇಂದಾ ಕೆಂಪಾಗಿರುವೆ ನೀನು
ಕಾಲನ ಹೊಡೆತಕ್ಕೆ ಮಂಕಾಗಿರುವೆ
ಮತ್ತೆ ಪುಟಿದೇಳು ಮೊದಲಿನ ಹಾಗೆ
ಅಂಚೆ ಪೆಟ್ಟಿಗೆ ಜನ ನೆನೆವರು ನಿನ್ನ
ಕಲ್ಮೇಶ ಬಡಿಗೇರ
೯೭೪೩೫೩೯೬೫೭
.......ಬಾದಾಮಿ.......
- Kalmesh Badiger
04 Dec 2020, 05:27 pm
Download App from Playstore: