ಮೂರ್ಖತನ

ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ


ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******

- ರಾಜು ಹಾಸನ

05 Dec 2020, 11:57 pm
Download App from Playstore: