ಮೌನ

ಮರೆಯದೆ ಕ್ಷಮಿಸು ನೆನಪಾಗಿದೆ
ಹಸಿವನು ಮರೆಸು ಋಣಿಯಾಗುವೆ...
ಜಗವಾ ಬೆರೆಸಿ, ಉಸಿರ ಮೆರೆಸಿ
ನೀ ನನ್ನ ಕನಸಿಗೆ ಸಾಕ್ಷಿಯಾಗಿರು...

ಮನಸಿನ ಸ್ಪರ್ಶವೆ ದೇಗುಲ
ಸ್ಪರ್ಶದ ಹಸಿವಿಗೆ ಇಂಚರ
ನೆನಪಿದು ಉಸಿರಿನ ಹಸಿವಿದು ನಿತ್ಯದ
ನಾ ನಿಂತೆ ಮೌನದಿ ನಿನ್ನ ನೆರಳನು ಹರಸಿ...

ಭಾವದ ಬೆಳಕು ಹುಸಿಯಾಗಿದೆ
ಕಡಲಿನ ನೆನಪು ಹಸಿಯಾಗಿದೆ
ಮನವ ತೆರೆಸಿ ಒಡಲ ಹರಸಿ
ನಾ ನಿನ್ನೆ ಹುಡುಕಲು ಮಾಯವಗಿದೆ...

- Shreepadh

11 Jul 2016, 09:22 pm
Download App from Playstore: