ದೇಶ ಭಕ್ತಿ

ದೇಶ ಭಕ್ತಿ
ದೇಶ ಭಕ್ತಿ
ಜನರ ಜನರ
ಹೋಡೆದಾಳುವ
ದ್ವೇಷ ಭಕ್ತಿ
ದೇಶವನ್ನೇ ಕೊಳ್ಳೆ
ಹೊಡೆಯುವ
ಕಳ್ಳ ಖದೀಮರ
ಅಂಧ ಭಕ್ತಿ
ಜನರ ಜನರ
ನಡುವೇ
ಜಾತಿ ಧರ್ಮದ
ಬೆಂಕಿ ಹಚ್ಚಿ
ತಮ್ಮ ತಮ್ಮ ಬೆಳೆ
ಬೇಯಿಸಿಕೊಳ್ಳುವ
ಜನ ನಾಯಕರ
ಬೂಟು
ಬೂಟಾಟಿಕೆ ಭಕ್ತಿ
ಜಾತಿ ಧರ್ಮವ
ಎತ್ತಿ ಕಟ್ಟಿ ದೇಶವನ್ನೇ
ಅಲ್ಲೋಲ
ಕಲ್ಲೋಲ ಮಾಡಿ
ಸಮಾಜವನ್ನೆ
ಭುಗಿಲೆಬ್ಬಿಸುವ
ದುಷ್ಟ ಜನರ
ದುಷ್ಟ ಭಕ್ತಿ

- ರಾಜು ಹಾಸನ

14 Dec 2020, 09:54 pm
Download App from Playstore: