ಬೇಡ ಬೇಕು
ದೇವರನ್ನ ಧಿಕ್ಕರಿಸಿ
ಬಾಬಾ ಸಾಹೇಬರನ್ನ
ಆರಾಧಿಸಿ ಪೂಜಿಸಿ
ಪುಂಗಿ ಪುರಾಣ
ಗ್ರಂಥ ಬೇಡ
ಸಂವಿಧಾನ ಗ್ರಂಥ
ಒಂದೇ ಸಾಕು
ಸಂವಿಧಾನ ಬೆಳೆಸಿ
ಜನರನ್ನ ಉಳಿಸಿ
ಜಾತಿ ಧರ್ಮವ ಕೊಂದು
ಜನರನ್ನ ರಕ್ಷಿಸಿ
ಮೂಢ ನಂಬಿಕೆಯ ಒದ್ದು
ನ್ಯಾಯ ನೀತಿಯ
ಒಪ್ಪಿ ಅಪ್ಪಿಕೊ
ಜಾತಿ ಧರ್ಮವ
ದ್ವೇಷಿಸು ಶಿಕ್ಷಿಸು
ಜನರ ಜನರನ್ನ
ಗೌರವಿಸು ಪ್ರೀತಿಸು
ಅಂಧ ಭಕ್ತಿ ಕಡೆಗಣಿಸಿ
ಮಾನವ ಭಕ್ತಿ ಪರಿಗಣಿಸಿ
ಆಚಾರ ತಿರಸ್ಕರಿಸಿ
ವಿಚಾರ ಸ್ವೀಕರಿಸಿ
ಮೇಲು ಕೀಳು ಬೇಡ
ಜಾತಿ ಭೇದ ಬೇಡ
ಎಲ್ಲಾರು ಒಂದೇ
ಎಂದು ಬದುಕಿ ಬಾಳಿ
- ರಾಜು ಹಾಸನ
15 Dec 2020, 09:33 am
Download App from Playstore: