ಬಂಗಾರದ ಮನುಷ್ಯ
ನಾ ಹೆಚ್ಚು ನಾ ಹೆಚ್ಚು
ನಾ ಮೇಲು ಮೇಲೆಂದು
ಗುದ್ದಾಡಿ ಕಿತ್ತಾಡಿ
ಕಚ್ಚಾಡಿ ಹೊಡೆದಾಡುವ
ಜಾತಿ ಧರ್ಮದ
ಮನುವಾದಿಗಳೇ
ಕೇಳಿರಿ ಕೇಳಿರಿ
ನಿವು ಏನೇ ಎಷ್ಟೇ
ಅರುಚಡಿ ಕಿರುಚಾಡಿ
ಕೂಗಾಡಿ ಪರದಾಡಿ
ಪರರ ಕೈ ಕಾಲಿಗೆ ಬಿದ್ದು
ತಿಪ್ಪರಲಾಗ ಹೊಡೆದು
ಮುಗಿಲೆತ್ತರಕ್ಕೆ ಬೆಳೆದು
ದೊಡ್ಡವರಾದರು
ವಿಶ್ವವೇ ಮೆಚ್ಚಿ ಒಪ್ಪಿ
ಅಪ್ಪಿ ಕೊಂಡಾಡಿದ
ಜಗ ಮೆಚ್ಚಿದ ಮಗ
ಬಂಗಾರದ ಮನುಷ್ಯ
ಬಾಬಾ ಸಾಹೇಬರ
ಕಾಲ ಧೂಳಿಗು ಸಮವಿಲ್ಲಾ
ಮತಾಂಧ ಮೂಢ
ಮನುವಾದಿಗಳೆ
ತಗ್ಗಿಸಬೇಕು ತಲೆ
ಬಾಬಾಸಾಹೇಬರ ಪಾದಕ್ಕೆ
*********ರಾಜು ಹಾಸನ*********
- ರಾಜು ಹಾಸನ
15 Dec 2020, 11:34 pm
Download App from Playstore: