ಸತ್ಯಕ್ಕೆ ಬೆಲೆ ಇಲ್ಲ
ದೇವರು ಇದ್ದಿದ್ದರೆ
ನಿನಗೆಕೆ ಬೇಕಿತ್ತು
ಸಂಸಾರದ ಹೊಣೆ
ದೇವರು ಸರ್ವಾಂತರ್ಯಾಮಿ
ಆಗಿದ್ದಾರೆ ನೀ ಏಕೆ ಸುತ್ತುತ್ತಿದೆ
ಆ ಕ್ಷೇತ್ರ ಈ ಕ್ಷೇತ್ರ ಪುಣ್ಯ ಕ್ಷೇತ್ರ
ದೇವರು ನಿನ್ನ ತಾನು ಮನ
ಧನ ಕಾಯುವುದೇ ಆಗಿದ್ದಾರೆ
ನೀನೇಕೆ ಕಾಯುತ್ತಿದೆ
ಗುಡಿಯ ಮೇಲೆ ಗುಡಿ ಕಟ್ಟಿ
ದೇವರ ಹುಂಡಿ
ಹಸಿದ ಹೊಟ್ಟೆಗೆ ಅನ್ನವ
ದೇವರೇ ದುಡಿದು
ಕೊಡುವುದಾದರೆ
ನೀನೇಕೆ ದುಡುಯುತ್ತಿದೆ
ಬಿಸಿಲು ಬೆಂಕಿ ಎನ್ನದೇ
ದೇವರೇ ಬಂದು ಕಾಯಿಲೆ
ಕಸಲೆಗೆ ಮದ್ದು ಕೊಡುವುದಾದರೆ
ಮದ್ದು ಚುಚ್ಚುಮದ್ದು
ಕೊಡುವ ವೈದ್ಯರು ಏಕೆ ಬೇಕಿತ್ತು
ಏನನ್ನು ಕೊಡದ ನೀಡದ
ಪರಿಹಾರಿಸದ ಕಲ್ಲನ್ನು ದೇವರೆಂದು
ಪೂಜಿಸುವುದು ಏತಕೆ
ಆರಾಧಿಸುವುದು ಏತಕೆ ಮೂಢರೇ
- ರಾಜು ಹಾಸನ
17 Dec 2020, 11:04 pm
Download App from Playstore: