ಒಲಿದರೆ ನಾರಿ ಮುನಿದರೆ ಮಾರಿ
ಓ ಹೆಣ್ಣೆ ಓ ಹೆಣ್ಣೆ
ದೇವರು ದೇವರೆಂದು
ಕಲ್ಲ ಕಂಬವ ಸುತ್ತಿ
ಪೂಜಿಸಿ ಆರಾಧಿಸುವೇಕೆ
ನಿನಗೆ ಓದು ಬರಹದ
ಹಕ್ಕು ಕೊಟ್ಟ ದೇವರು
ಬಾಬಾ ಸಾಹೇಬರ
ಅರಿಯದೆ ಅಜ್ಞಾನದ
ಗುಂಡಿಗೆ ಬೀಳುವೇ ಏಕೆ
ಓ ಹೆಣ್ಣೆ ಓ ಹೆಣ್ಣೆ ಓ ನನ್ನ ಹೆಣ್ಣೆ
ದೇವರು ದೇವರು
ದೇವರೇನ್ನುವಾ ನಿನ್ನ
ದೇವರು ಬಂದು ಕೊಡಲಿಲ್ಲ
ನಿನಗೆ ಸ್ವಾತಂತ್ರ ಸಮಾನತೆ
ಆಚಾರ ವಿಚಾರದ ಹಗ್ಗ ಕಟ್ಟಿ
ಮೂಢನಂಬಿಕೆಯ ಮೂಗುದಾರ
ಬಿಗಿದು ಉಸಿರುಗಟ್ಟಿಸಿ
ಕೈ ಕಾಲು ಮೈ ಮೂಳೆ ಮುರಿದು
ನಾಲ್ಕು ಗೋಡೆಗಳ
ಮಧ್ಯೆ ಕುರಿಸಿ ಬಂಧಿಸಿದ ದೇವರ
ಹಾಡಿ ಹೊಗಳುವೇ ಏಕೆ
ಓ ನನ್ನ ನಾರಿಮಣಿಯೇ
ಗಂಡು ಹೆಣ್ಣಿನ
ಬೇಧ ಭಾವ ಬೀಜ ಬಿತ್ತಿ
ಶೋಷಿಸಿದಾ ದೇವರ
ಪೋಷಿಸಿ ಕೊಂಡಾಡುವೇ ಏಕೆ
ಓ ನನ್ನ ಮರುಳೆ
ಗಂಡು ಹೆಣ್ಣು ಲಿಂಗ
ಬೇರೆಯಾದರು
ಕನಸು ಮನಸು ಜೀವಾ
ಒಂದೇ ಒಂದೇ ಎಂದು
ಸಮಾನತೆ ಬೆಳಕು ಚೆಲ್ಲಿ
ಸ್ವಾತಂತ್ರ ತಂದುಕೊಟ್ಟ
ಬಾಬಾಸಾಹೇಬರ ಮರೆಯಬೇಡ
ಮರೆತು ಬಾಳಬೇಡ
ಆರಾಧಿಸಿ ಪೂಜಿಸು ಓ ನನ್ನ ಹೆಣ್ಣೆ
ಬಾಬಾ ಸಾಹೇಬರ
ಜ್ಞಾನದ ಕಿಡಿ ಹೊತ್ತಿಸಿ
ಸಂವಿಧಾನವ ಅರಿತು
ನೀ ಓದು ಬರಹ ಕಲಿತು
ಅಧಿಕಾರದ ಚುಕ್ಕಾಣಿ ಹಿಡಿದು
ಮುಗಿಲೆತ್ತರಕ್ಕೆ ಬೆಳೆದು ನಿಂತರೆ
ಮನುವಾದಿಗಳ ಕುತಂತ್ರ
ಅಲ್ಲೋಲ ಕಲ್ಲೋಲ
ದುಷ್ಟ ರಾಕ್ಷಸರ ಹುನ್ನಾರ
ಅತಂತ್ರ ಅತಂತ್ರ ಅತಂತ್ರ
ತಿಳಿದು ಬಾಳಿ ಬದುಕಿ
ಪೂಜಿಸಿ ಆರಾಧಿಸು ಓ ಹೆಣ್ಣೆ
*********ರಾಜು ಹಾಸನ*********
- ರಾಜು ಹಾಸನ
21 Dec 2020, 06:49 pm
Download App from Playstore: