ಮಡಿಲಲಿ...
ಮಡಿಲಲಿ ತಲೆಯೂ
ಹೀಗೆ ಇರಲಿ
ಕವಿದ ಇರುಳು
ಸರಿದು ಬಿಡಲಿ
ತಲೆಯ ನೇವರಿಸಿತಿರು
ಮನವೂ ಮಲಗಲಿ
ಕತ್ತಲಿಗೂ ನಿದ್ರೆಯತ್ತಿ
ಹೊಂಬೆಳಕಾಗಲಿ
ತಟ್ಟು ತಟ್ಟು ತನುವ
ಮನವು ಹಗುರಾಗಲಿ
ಕಾಡುವ ನೋವುಗಳಿಗೆ
ಕೊಂಚ ಭಯ ತರಲಿ
ಸಿಹಿ ಮುತ್ತೊಂದು
ನೊಸಲಿನ ಪಾಲಿಗಿರಲಿ
ತುಟಿಯಂಚಲಿ ನಸುನಗೆ
ಮಳೆ ಹನಿಯಲಿ
ಜಾರುವ ಮುಂಗುರುಳ
ಕೈ ನಯವಾಗಿ ಸರಿಸಲಿ
ಮುಚ್ಚಿದ ಕಣ್ಣ ತುಂಬಾ
ಕನಸ ಫಸಲಾಗಲಿ
ಕಾಡಿಸುವ ಗೆಳತಿಗೆ
ಲಾಲಿ ಹಾಡೊಂದಿರಲಿ
ಪ್ರೇಮದ ಪರಿಗೆ
ಜಗವೇ ಮಡಿಲಾಗಲಿ
- ಶ್ರೀಕಾವ್ಯ
21 Dec 2020, 11:26 pm
Download App from Playstore: