ಜಗಜ್ಯೋತಿ ಜ್ಞಾನಜ್ಯೋತಿ
ಖಡ್ಗ ಗುರಾಣಿ ಹಿಡಿದು
ಮನುವಾದಿಗಳು
ಯಾತ್ರೆ ದಂಡಯಾತ್ರೆ
ತಂತ್ರ ಕುತಂತ್ರ ಮಾಡಿ
ಕಿತ್ತುಕೊಂಡರು
ಜನಗಳ ಜೀವಾ ಮಾನ
ಉರುಳಿಸಿದರು
ಜನಗಳ ಹೆಣ
ಬದುಕಿನ ಕಣ
ಜಗಜ್ಯೋತಿ ಜ್ಞಾನಜ್ಯೋತಿ
ಬಾಬಾ ಸಾಹೇಬರು
ಲೇಖನಿ ಹಿಡಿದು
ಸಂವಿಧಾನ ಗ್ರಂಥ
ಬರೆದು ಕೊಟ್ಟರು
ಕುಡಿಯಲು ನೀರು
ಜೀವಿಸಲು ಉಸಿರು
ಹೇಳಿ ತಿಳಿಸಿ ಕೊಟ್ಟರು
ಬದುಕವಾ ರೀತಿ ನಿಯಮ
ನ್ಯಾಯ ನೀತಿ ಸ್ವಾಭಿಮಾನ
ಓದು ಬರಹ ಕಲಿತು
ಸ್ವಾತಂತ್ರವಾಗಿ ಬದುಕಿ
ಬಾಳಲು ಬಿಟ್ಟರು
ಸಮಾನತೆಯ ಹಕ್ಕು ಕೊಟ್ಟು
ಭೀಮ ರಾವ್ ಭೀಮ ರಾವ್
- ರಾಜು ಹಾಸನ
23 Dec 2020, 12:18 am
Download App from Playstore: