ಜೈ ಭೀಮ್ ಸೈನಿಕರು
ಮನುವಾದಿಗಳ
ದಂಡೇ ಬರಲಿ
ದಾಳಿಯೇ ಬರಲಿ
ಗುಡುಗು ಬಂದರು
ಸಿಡಿಲೇ ಬಡಿದರು
ತಲೆ ತಗ್ಗಿಸಿ ಬಾಳಲ್ಲಾ
ಮಳೆಯೇ ಸುರಿಯಲಿ
ಚಳಿಯೇ ಕೊರೆಯಲಿ
ಬಿಸಿಲೇ ಸುಟ್ಟರು
ಹೆದರಿ ಬೆದರಿ ಓಡೋದಿಲ್ಲ
ಘರ್ಜಿಸಿ ಘರ್ಜಿಸಿ
ಆರ್ಭಟಿಸಿ ಆರ್ಭಟಿಸಿ
ಧೂಳ್ ಎಬ್ಬಿಸಿ
ಮುನ್ನುಗ್ಗಿ ನಡೆದರೆ
ಧೂಳಿಪಟವಾಗುವುದು
ಮನುವಾದಿಗಳ ಪಡೆ
ಎಚ್ಚರ ಎಚ್ಚರ
ನಾವು ಜೈ ಭೀಮ ಸೈನಿಕರು
********ರಾಜು ಹಾಸನ********
- ರಾಜು ಹಾಸನ
23 Dec 2020, 05:40 pm
Download App from Playstore: