ನೀ ಶಾಶ್ವತ
ಜೊತೆಗೆ ಹುಟ್ಟದಿದ್ದರೇನು
ಜೊತೆಗೆ ನಡೆದಿಲ್ಲವೇನು
ರಕ್ತ ಹಂಚಿಕೊಳ್ಳದಿದ್ದರೇನು
ರಕ್ತ ಸಂಬಂಧದಂತೆ ಹೊಂದಿಕೊಂಡಿಲ್ಲವೇನು
ನೀ ದೂರವಿದ್ದರೇನು
ನಿನ್ನ ಸ್ನೇಹ ದೂರಾದುದೇನು
ಅಂದು ಕಳೆದ ಸಮಯ
ಇಂದಿಗೂ ಸ್ಮರಣೀಯ
ನಿನ್ನೊಡನೆ ಇದ್ದ ಸಮಯ ಕಳೆದಿದೆ
ನಿನ್ನೊಡನೆ ಕಳೆದ ನೆನಪು ಅಳಿಯದು
ನೀ ಶಾಶ್ವತ
ನಿನ್ನ ಸ್ನೇಹ ಚಿರಪರಿಚಿತ.........
--ಕಲಾಕುಸುಮ
- Kusuma Kusum
23 Dec 2020, 07:14 pm
Download App from Playstore: