ಮರ
ಬಾವಿಯ ದಂಡೆಯ ಮೇಲೊಂದು
ಬಂಗಾರದ ಮರವೊಂದು ಬೆಳೆದು
ಹಾದಿ ಬೀದಿಗಳಿಗೆಲ್ಲ ನೆರಳಾಗಿ ನಿಂತು
ಹಾದೋಗೊ ಜನರಿಗೆ ದೊರೆಯಾಗಿ
ಧನ ಕಾಯೋ ಹುಡುಗರಿಗೆಲ್ಲರಿಗು
ಆಟವ ಆಡುವ ವೇದಿಕೆ ಯಾಗಿ
ಮರಕೊತಿಗಳಿಗೆಲ್ಲ ನೇರವಾದೆ ನೀ
ಊರ ಜನರಿಗೆ ಗುರು ವಾದೆ ನೀನು
ನ್ಯಾಯ ಅನ್ಯಾಯ ನೀಡುವಂತ
ನ್ಯಾಯ ದೇವತೆಯಾಗಿ ನಿಂತಿರುವೆ
ನಂಬಿಕೆ ಆಚರಣೆ ಗಳಿಂದಲೆ ನೀನು
ಮಹಾತಾಯಿ ದೇವರಾಗಿ ಕಾನಿಸುವೆ
ಹಸುಳೆಗಳಿಗೆಲ್ಲ ತೊಟ್ಟಿಲು ನೀನಾದೆ
ಬಾಣಂತಿಯರಿಗೆ ಹೊರಸು ನೀನಾದೆ
ನಾದಲಹರಿಯ ಹೊರಡಿಸುವಂತಹ
ನಗಾರಿ ಡೋಲು ಡೋಳ್ಳಾಗಿ ಕುಣಿದೆ
ಅಟ್ಟ ಮೆಟ್ಟಿಲು ಅರಮನೆ ಚತ್ತಾದೆ
ಉತ್ತಿ ಬಿತ್ತುವ ರೈತನಿಗೆ ನೆರಳಾದೆ
ಸಿದ್ಧ ಶರಣರ ಪಾದಕ್ಕೆ ಪಾದುಕೆಯಾಗಿ
ದೇವಮಂದೀರದಲ್ಲಿ ಪಲ್ಲಕ್ಕಿ ನೀನಾದೆ
ಕಲ್ಮೇಶ ಬಡಿಗೇರ
......ಬಾದಾಮಿ........
- Kalmesh Badiger
23 Dec 2020, 09:04 pm
Download App from Playstore: