ಹುಟ್ಟೂರು

ಹತ್ತೂರು ಸುತ್ತಿಬಂದ ಮ್ಯಾಲಂತು
ಹೆತ್ತೂರು ಹಾದಿಯು ಹುವಾಯ್ತು
ಹುಟ್ಟೂರು ಬಿಟ್ಟೋದ ನೆನಪಿಸಿ
ಹಿತ್ತಲ ಗಿಳಿಮರಿ ಕೂಗಿ ಕರೀತಾ

ಕೆರೆ ಕಟ್ಟೆ ತೊರೆ ಭಾವಿಗಳ ಈಜುತ್ತಾ
ಚಿನ್ನಿ ದಾಂಡು ಗೋಲಿಗಳ ಆಡುತ್ತಾ
ಬರಿಗಾಲಲಿ ಬಿರುಬಿಸಿಲ ಎದುರಿಸುತ
ಸುಡುಗಾಡು ಬೆಟ್ಟವ ಸುತ್ತಿದ ನೆನಪು

ಹೊತ್ತಿನುಟಕ್ಕಾಗಿ ಅತ್ತು ಕರೆದ ನೆನಪು
ಕಷ್ಟದಲು ಕಾಡಿಸಿ ನಕ್ಕಂತಾ ನಗುವು
ಹಟಹಿಡಿದು ಹೊಡೆಸಿಕೊಂಡು ಹೋಗಿ
ಅಪ್ಪ ಅಮ್ಮನ ನೆನೆಸಿ ಓಡಿಬಂದ ನೆನಪು

ಊರ ಪುಂಡರಿಗೊಮ್ಮೆ ಬುದ್ದಿ ಕಲಿಸಿ
ಉದ್ಯೋಗ ಹುಡುಕುತ ಹೊರಬಂದು
ಸಾಧನೆಯ ಹಾದಿಯಲ್ಲಿ ಹಿಡಿದುಕೊಂಡು
ಸುಂದರ ಬದುಕ ಕಟ್ಟಿಕೊಂಡ ನೆನಪು

ಇಪ್ಪತ್ತು ವರುಷಗಳು ಉರುಳಿದ ಮೇಲೆ
ಹುಟ್ಟೂರು ಎಂತೆಂದು ಹಂಬಲಿಸಿ ಬಂದೆ
ಆದರೆ ನನ್ನೂರ ಪರಿಸರದಲ್ಲಿ ಅದೇಕೋ
ನಾನೊಬ್ಬ ಅಪರಿಚಿತನಾಗಿ ಹೋಗಿರುವೆ

. ಕಲ್ಮೇಶ ಬಡಿಗೇರ
ಬದಾಮಿ

- Kalmesh Badiger

23 Dec 2020, 09:22 pm
Download App from Playstore: