ಗೀತೆ ರಚನೆ ಪ್ರಯತ್ನ
ಹೆತ್ತವರನ್ನು
ಬಿಟ್ಟು ಬಂದ ಮೇಲೆ
ಮತ್ತೆನು ಬಿಡುವುದು ಬಾಕಿಯಿದೆ
ಆಗಿದ್ದು ಆಯ್ತು ಎದ್ದೆಳು ಕಂದ
ಹೊತ್ತಾಯಿತು ಹೋಗು ಮನೆಗೆ
ಮನೆಯ ಕಡೆಯಿಂದ ಬಂದಿದೆ
ಒಂದು ಕರೆಯ ಕೂಗು
ಅಪ್ಪ ಅವ್ವನ ಬೆಚ್ಚನೆ ಪ್ರೀತಿ
ಇಲ್ಲಿ ಸಿಗದು ನಿಂಗಿನ್ನು
ನಿನಗಿದು ಬೆಕಿತ್ತಾ ಕಂದ
ವಾಪಸ್ಸು ಹೊಂಟೊಗು ಮನೆಗೆ
ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ
ಎಲ್ಲಿಗೆ ಹೋದ್ರು ಇದ್ದು ಸತ್ತಂಗೆ
ಮನೆಯಲ್ಲೇ ನಿನ್ನ ಉಸಿರಿದೆ
ಹುಟ್ಟಿ ಬೆಳೆದು ಆಡಿ ಬಂದ
ಕಟ್ಟಿದ ಮನೆಯಿದೆ
ಕಿತ್ತೋದ ಕನಸಿಗೆ ಹಳದ್ ಆಸೆಗೆ
ಪ್ರೀತಿಗೆ ಬಿದ್ದು ಬೀದಿಗೆ ಬಂದೆ
ಊರು ಬಿಟ್ಟು ಬಂದು
ತಿಪ್ಪೆ ಗುಂಡಿಯ ಮೇಲಿನ
ತೆಂಗಿನ ಮರದ ಎಳೆನೀರು ನಿನಾದೆ
ಮನೆಗೆ ತಂಗಿ ಬರುತ್ತಾಳೋ
ಮಗನಿಗೆ ಹೆಸರು ಇಟ್ಟಳೋ
ಈ ಸಲ ಬಾರಿ ಮಳೆಯಂತೆ
ಅತ್ತೆಯ ಮಗನ ಮದ್ವೆಯಂತೆ
ಮಾವ ಬಿಲ್ಡಿಂಗ್ ಕಟ್ನಂತೆ
ಚಿಕ್ಕ ತಾತಂಗೆ ಉಸರಿಲ್ವಿಂತೆ
ತಂಗಿಯ ಮಗಳು ಕೆಳ್ತಳೋ
ಆಗಾಗ ನಿನಗೆ ಬೈತಳೋ
ನಿನಗೂ ಸಂಸಾರ ಇದೆ
ವಾಪಾಸು ಹೊಂಟೊಗು ಮನೆಗೆ
ಅವರಿವರ ನೆನಪು ಕಣ್ಣ್ ಕಟ್ಟಿದಂಗೆ
ಕನಸು ಕಾಣಿಸಿಕೊಳ್ಳೋದ್ಯಾಕೆ
ಅಪ್ಪ ಅವ್ವ ಕನಸಿಗೆ ಬಂದು
ಕಣ್ಣೊರೆಸಿ ಅಪ್ಪಿ ಕರೆದು ಬಾ
ಅಂದಂಗೆ ಆಗೋದ್ಯಾಕೆ
ಮಾತು ಕೊಟ್ಟು ಕೆಟ್ಟವನು
ಎಲ್ಲಿಗೆ ಹೋದ್ರು ನಿಮ್ಮದೆ ಧ್ಯಾನ
ಬಂದೆ ಬರ್ತೀನಿ ಊರಿಗೆ
ಬಂದು ಸೇರುತ್ತಿನಿ ಮನೆಗೆ
ಚಡ್ಡಿ ದೋಸ್ತ್ ರೆಲ್ಲ ಕಾಯ್ತಾವರೊ
ಅಕ್ಕ ಪಕ್ಕದ ಜನ ಕೆಳತ್ತಾವರೊ
ಕಲಿಸಿದ ಮಿಸು ಸ್ಕೋಲ್ ಬಿಟ್ರು
ತಂಗಿಯ ಗಂಡ ಸರಿಯಾದ
ಹಾಳೆ ಮನೆ ಮುರ್ದೋಗಿದೆ
ಅವ್ವಂಗೆ ಕಾಯಿಲೆ ಮೊನ್ನೆ ಇಂದ
ಅಪ್ಪಂಗೆ ಕೆಲಸ ಸಾಕಗಿದೆ
ತಂಗಿಗೆ ನಿನ್ದೆ ಯೊಚ್ನೆ
ಅದಗೆಟ್ಟಿದೆ ಬದುಕು
ವಾಪಸ್ಸು ಹೊಂಟೊಗು ಮನೆಗೆ
ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ
- ರಾಜು ಹಾಸನ
28 Dec 2020, 12:45 am
Download App from Playstore: