ಯಾರೋ ಬರುವರು

ಯಾರೋ ಬರುವರು
ಏನೋ ಬರೆವರು
ಅಳಿಸಲಾಗದ ಈ ಹೃದಯದಲಿ.

ಬರಿದೇ ತೊರೆವರು
ಬದುಕನು ಸುಡುವರು
ಬಣ್ಣ ಗೆಟ್ಟ ಬಯಲಾಟದಲಿ

ಕನಸನು ಕದಿವರು
ಮನಸನು ಇರಿವರು
ಮೊನಚು ಮಾತುಗಳ ಈಟಿಯಲಿ

ಸತ್ತೂ ಸಾಯದ
ಮರೆತೂ ಹೋಗದ
ಮರಳುಗಾಡಿನ ಹುಸಿ ಬದುಕಿನಲ್ಲಿ...

- ಶ್ರೀಗೋ.

12 Jul 2016, 05:51 pm
Download App from Playstore: