ದ್ರಾವಿಡರು

ಗುಲಾಮಗಿರಿ ಗುಲಾಮಗಿರಿ
ದಶ ಶತ ಶತಮಾನಗಳ
ಕೆಂಪು ಕೋತಿಗಳ
ಕಪ್ಪಿ ಮುಷ್ಟಿಯ
ಗುಲಾಮಗಿರಿ ಉರುಳಿ
ಸೂರುವಾಗಿದೆ ಸೂರುವಾಗಿದೆ
ಹುಟ್ಟಿನ ಅರಿವೇ ಇಲ್ಲದ
ನೆಲದ ಪರಿವೆಯೇ ಇಲ್ಲದ
ಮನುವಾದಿಗಳ ಮಂತ್ರ
ತಂತ್ರ ಕುತಂತ್ರದ ಗುಲಾಮಗಿರಿ

ಹೋರಾಡುವ ಛಲವಿಲ್ಲದಿದ್ದರು
ಛತ್ರಿ ಹಿಡಿದು ಪಟ್ಟಕ್ಕೇರಿ
ಚಟ್ಟ ಕಟ್ಟಿಸಿಕೊಂಡ
ಮನುವಾದಿಗಳ ಗುಲಾಮಗಿರಿ

ಕಚ್ಚುವುದು ಕಚ್ಚುವುದು
ಕಚ್ಚಿ ಸಾಯುಸುವುದು
ಹಾಲೆರೆದ ವಿಷ ಸರ್ಪ
ರೈತ ಬೆಳೆದ ಅನ್ನ ತಿಂದು
ಕಕ್ಕುವುದು ವಿಷ
ವಿಷ ವಿಷ ಕುಕ್ಕುವ
ಮನುವಾದಿಗಳ
ವಿಷದ ಗುಲಾಮಗಿರಿ

ಕಥೆ ಕಟ್ಟು ಕಥೆ
ಜನರಿಗೆ ತಲೆ ಕಟ್ಟಿ
ಪುಂಗಿ ಊದಿ
ಪಂಗನಾಮ ಹಾಕುವ
ದುಷ್ಟರ ಜನರ
ಗುಲಾಮಗಿರಿ

ದೇವರು ದೇವರೆಂದು
ಗುಡಿ ಗೋಪುರ ಕಲ್ಲು
ಕಂಬದ ಸುತ್ತ ಸುತ್ತಿಸಿ
ಆಚಾರ ವಿಚಾರವೆಂದು
ಸ್ತ್ರೀಯರ ಅಪಚಾರ
ಅವಮಾನ ಮಾಡಿದ
ನೀಚರಾ ಗುಲಾಮಗಿರಿ
ಹೊರ ಬನ್ನಿ ಹೊರ ಬನ್ನಿ
ನೀಚ ದುಷ್ಟ ಮನುವಾದಿಗಳ
ಗುಲಾಮಗಿರಿಯಿಂದ
ಹೊರ ಬಂದು ಹೋರಾಡಿ
ಹೊಡೆದು ಒದ್ದು ಓಡಿಸಿ
ಗೆದ್ದು ಜಯಸಿ ನಿಲ್ಲಿರಿ
ನನ್ನ ದಲಿತ ದ್ರಾವಿಡ ಬಂಧುಗಳೇ

- ರಾಜು ಹಾಸನ

28 Dec 2020, 11:08 pm
Download App from Playstore: