ದೊಡ್ಡವರು

ದೊಡ್ಡವರು ದೊಡ್ಡವರು
ದುಡ್ಡೆಂದರೆ ಬಾಯಿಬಿಡುವಾ
ದಡ್ಡ ಜನಗಳು
ಕೋಟಿ ಕೋಟಿ ಕೊಡಿಟ್ಟರು
ಬಿಡುವುದಿಲ್ಲ ಚಿಕ್ಕವರ
ಚಿಲ್ಲರೆ ಕಾಸಿಗೆ ಕೈ ಚಾಚುವ
ದೊಡ್ಡ ಜನರು ದಡ್ಡ‌ ಜನರು
ಏನೇ ಬರಲಿ ಏನೇ ಆಗಲಿ
ದೊಡ್ಡವರಿಗೆ ಬೇಕು
ಕೊಟು ಬೂಟು ನೋಟು
ಜನರ ತಲೆ ಹೊಟ್ಟೆ ಹೊಡೆದು
ಸುಲಿಗೆ ವಸುಲಿ ಮಾಡುವ
ದೊಡ್ಡ ಜನರು ದಡ್ಡ ಜನರು
ಚಿಕ್ಕವರು ಬೆಳೆದ ಅನ್ನ ತಿಂದು
ಬದುಕು ನಡೆಸುವ
ದೊಡ್ಡವರು ಜನರು ದಡ್ಡ ಜನರು
ಚಿಕ್ಕವರು ದುಡಿದರೆ
ದೊಡ್ಡವರ ಜೀವನ
ದುಡಿಯದಿದ್ದರೇ ದೊಡ್ಡವರ
ಪಯಣ ಕಾಣದ ಕಡಲಿನತ್ತಾ
ಚಿಕ್ಕವರಿಲ್ಲದೆ ದೊಡ್ಡವರಿಲ್ಲಾ
ತಿಳಿಯೋ ಮಂಕುತಿಮ್ಮಣ್ಣ

- ರಾಜು ಹಾಸನ

29 Dec 2020, 02:57 pm
Download App from Playstore: