ಭೀಮ ಕೋರೆಂಗವ್
ಭೀಮ್ ಭೀಮ್
ಭೀಮ ಕೋರೆಂಗವ್
ಧೂಳ್ ಧೂಳ್ ಧೂಳ್
ಮಾದಗಜಗಳ ಆರ್ಭಟಕ್ಕೆ
ಮನುವಾದಿಗಳು
ಧೂಳ್ ಧೂಳ್ ಧೂಳ್
ಝಳ ಝಳ ಝಳಪಿಸುವ
ಜೈ ಭೀಮ್ ಸೈನಿಕರ ಕೈ ಕತ್ತಿಗೆ
ಮನುವಾದಿಗಳ ಕೈ ಕಾಲು ತಲೆ
ಮೈ ಮೂಳೆ ಪುಡಿ ಪುಡಿ ಹುಡಿ ಹುಡಿ
ರಣ ರಣ ರಣಹೇಡಿಗಳ
ಸಾಲು ಹೆಣಗಳ ಉರುಳಿಸಿ
ಗೆದ್ದು ಜಯಭೇರಿ ಬಾರಿಸಿದ
ರಣ ರಣ ರಣರಂಗದ
ಕೆಚ್ಚೆದೆ ಗಂಡುಗಲಿಗಳು
ದಲಿತ ಸೈನಿಕರ ನೆನಪಿರಲಿ
ಹಾರಾಟ ತೂರಾಟ
ಮನುವಾದಿಗಳ ಕಪ್ಪಟನಾಟಕ
ಭೀಮ್ ಘರ್ಜನೆಯ
ಸಿಡಿಲಬ್ಬರಕ್ಕೆ ಧೂಳಿಪಟ
ಕಿಚ್ಚು ಕಿಚ್ಚು ಕಿಚ್ಚು
ಜಾತಿ ಧರ್ಮದ ಬೆಂಕಿ ಹಚ್ಚಿ
ದೇಶವನ್ನೇ ಹೊತ್ತಿ ಉರಿಸಿದ
ಮನುವಾದಿಗಳ ಸಾಲು ಸಾಲು
ಹೆಣದ ರಾಶಿಗೆ
ಬೆಂಕಿ ಕೊಳ್ಳಿ ಇಟ್ಟ ಶೂರರು
ಧೀರರು ಸಿಡಿಲ ಸಿಂಹದ ಮರಿಗಳು
ಭೀಮ್ ಕೋರೆಂಗವ್ ಸೈನಿಕರು
********ರಾಜು ಹಾಸನ*********
- ರಾಜು ಹಾಸನ
31 Dec 2020, 10:30 pm
Download App from Playstore: