ಅರಿತು
ದೇವರು ದೇವರು
ಬೆಟ್ಟ ಗುಡ್ಡದ ಮೇಲಿನ
ಕರಿ ಕಲ್ಲ ದೇವರು
ಬಡವರ ಬದುಕು ಬರಿದಾಗಿಸಿದ
ಬಂಡೆ ದೇವರು
ಮನುವಾದಿಗಳಿಗೆ ಮನೆ ಮಠ
ಬಟ್ಟೆ ಕೊಟ್ಟ ಮಂತ್ರ ತಂತ್ರ
ಕುತಂತ್ರದ ಕಲ್ಲು ದೇವರು
ದೇವರು ದೇವರು
ನಸುಕಿನ ಮುಸುಕಿನ
ಬಿಸಿಲು ಬೆಂಕಿಯ ಝಳಕ್ಕೆ
ಮೈಯೊಡ್ಡಿ ಮೈ ಮೂಳೆ
ಮುರಿದರು ಮೈ ಬಗ್ಗಿಸಿ
ದುಡಿದು ತಿನ್ನುವವರಿಗೆ
ದುಡಿಮೆಯೇ ದೇವರು
ನೆಲ ಜಲ ಗಾಳಿ ಸೂರ್ಯ
ಚಂದ್ರರೇ ದಿಕ್ಕಾಪಾಲಾಕರು
ಕುಂತಲ್ಲಿಯೇ ಕುಂತು
ವಾಲಾಡಿ ತೂಕಡಿಸಿ
ದುಡಿಯದೇ ದುಡಿಸಿಕೊಂಡು
ತಿನ್ನುವವರಿಗೆ ಜನರಿಗೆ
ಕಲ್ಲು ಬಂಡೆಯೇ ದೇವರು
ಗುಡಿಯ ಸುತ್ತಲಿನ
ಕಲ್ಲು ಕಂಬ ಹೋಮ ಹವನ
ಮಂತ್ರ ತಂತ್ರವೇ
ಕುತಂತ್ರಿಗಳ ದಿಕ್ಕಪಾಲಾಕರು
ಮೂಢನಂಬಿಕೆಗೆ
ಬಲಿಯಾಗಿ ತಲೆ
ತಗ್ಗಿಸಿ ಬಗ್ಗಿಸಿ
ಮಾನುವಾದಿಗಳ
ಗುಲಾಮನಾಗಬೇಡ
ತಲೆ ಎತ್ತಿ ನಡೆ
ವಿದ್ಯೆ ಬುದ್ಧಿ ಕಲಿತು
ಸಂವಿಧಾನ ಅರಿತು
- ರಾಜು ಹಾಸನ
06 Jan 2021, 12:17 am
Download App from Playstore: