ಅಕ್ಕಿ ಕಾಳು
ಸೊನೆಯೇ ಸುರಿಯಲಿ
ಚಳಿಯೇ ಕೋರೆಯಲಿ
ಬಿಸಿಲೇ ಮೈ ಸುಡಲಿ
ಏನೇ ಆಗಲಿ ಏನೇ ಬರಲಿ
ಏನೇ ಬಂದು ಹೋದರು
ಶ್ರಮದಿ ದುಡಿದು ದೇಶಕ್ಕೆ
ಅನ್ನ ಕೊಟ್ಟ ದೇವರು
ರೈತ ರೈತ ದೇವರು
ಸುರಿವ ಮಳೆಯಲ್ಲಿ
ಮನೆಗಳು ಮುಳುಗಿದರು
ಕೊರೆಯುವ ಚಳಿಗೆ
ಗಡ ಗಡ ನಡುಗಿ ನಲುಗಿದರು
ಬಿಸಿಲು ಬೆಂಕಿಗೆ ಬೆಂದು ಸುಟ್ಟರು
ಛಲ ಬಿಡದೆ ದುಡಿಯುವ
ಕಾಯಕ ಯೋಗಿ ನೇಗಿಲ ಯೋಗಿ
ದೇಶದ ಬೆನ್ನೆಲುಬು ರೈತ ದೇವರು
ತಟ್ಟೆ ತುಂಬಾ
ಹೊಟ್ಟೆ ತುಂಬಾ
ತಿಂದು ತೇಗುವುದು
ರೈತ ಬೆಳೆದ ಅನ್ನವಾದರು
ಪೊಜಿಸಿ ಆರಾಧಿಸಿ
ಬಿದ್ದು ಬೇಡುವುದು ಮಾತ್ರ
ಜನರೇ ಸೃಷ್ಟಿಸಿ
ನಿರ್ಮಿಸಿದ ಗುಡಿಯೊಳಗಿನ
ಕಲ್ಲು ಬಂಡೆಯ
ಇದು ಎಂತಹ ಲೋಕವಯ್ಯ
ರೈತನ ಗೋಳು
ದೇಶ ಆಳುವ
ನಾಯಕರಿಗಿಲ್ಲ
ಆದರೆ ರೈತರ ಬೆಳೆದ
ರಟ್ಟೆ ಬೇವರಿನ
ಅನ್ನ ಮಾತ್ರ ಇವರ
ಹೊಟ್ಟೆಗೆ ಬೇಕು
ಇವರು ಎಂತಹ ನಾಯಕರೋ
ಇದು ಯಾವ ಸೀಮೆಯ
ನ್ಯಾಯ ನೀತಿ ಧರ್ಮವೋ
ಕಷ್ಟವೇ ಇರಲಿ
ಸುಖವೇ ಇರಲಿ
ಬೆವರು ಸುರಿಸಿ
ಕಣ್ಣೀರು ಹರಿಸಿ
ಮೈ ಮೂಳೆ ಮುರಿದರು
ದುಡಿದು ಕೊಟ್ಟ ಅನ್ನವ
ಜೀವವಿಲ್ಲದ ಕಲ್ಲು
ಕಂಬಕ್ಕೆ ಎಡೆ ಇಟ್ಟು ತಿನ್ನುವ
ಜನರಿಗೇನು ಗೊತ್ತು
ರೈತನ ಕಷ್ಟ ಅನ್ನದ ಬೆಲೆ
ರೈತರ ಗೋಳು
ಕೇಳದ ನಾಯಕರು
ಇದ್ದರೂ ಒಂದೇ
ಹೋದರು ಒಂದೇ
ಸತ್ತು ಬಿಟ್ಟರೆ
ಹಾಕಿಬಿಡುವೆನು ಅವರ
ಎದೆಯ ಮೇಲೆ
ಮೂರಿಡಿ ಮಣ್ಣು
ಬಾಯಿಗೆ ರೈತ
ರೈತರು ಬೆಳೆದ ಅಕ್ಕಿ ಕಾಳು
- ರಾಜು ಹಾಸನ
07 Jan 2021, 12:12 am
Download App from Playstore: