ಬಾಲ್ಯದ ನೆನಪು
ಕಳೆದುಹೋದ ದಿನಗಳು
ಮರುಕಳಿಸುತ್ತಿದೆ ನೆನಪುಗಳು
ಒಮ್ಮೆ ಹೋಗಬೇಕು ಸವಿಬಾಲ್ಯ ದ ನೆನಪಿಗೆ
ಧನ್ಯವಾದಗಳು ನೆನಪನ್ನು ನೆನಪಿಸುವ ಸವಿಕನಸಿಗೆ!!
ಬಾಲ್ಯದ ಹಾದಿ ಅತಿ ಕಠಿಣ
ನಾಲ್ವರಿಗೆ ಅದೆ ಸುಂದರ
ತುಂಟಾಟದ ಆದಿನ ಮನೋಹರ
ಕೆಲವೊಂದು ಕ್ಷಣ ಭಯಂಕರ!!
ಅಪ್ಪನ ಕೈಯಲ್ಲಿ ಸ್ಕೇಲ್
ಅಮ್ಮನ ಕೈಯಲ್ಲಿ ಕೋಲು
ಸ್ಕೇಲ್ ಕೋಲು ಸೇರಿದಾಗ
ನಾವಾಗುತ್ತಿದ್ದೆವು ಅಡಿ ಮೇಲು!!
ಅಪ್ಪನ ಬೈಗುಳದ ಪಾಠ
ಅಮ್ಮನ ಪ್ರೀತಿಯ ಊಟ
ತಣಿಸುತ್ತಿತ್ತು ಉದರವ ಎಂದು
ಋಣಿಯಾಗಿರುವೆವು ಅವರಿಗೆ ಎಂದೆಂದೂ!!
ಬಾಲ್ಯಕ್ಕೆ ಹೋಗಬೇಕೆನಿಸುತ್ತಿದೆ ಈ ಯೌವ್ವನದಿ
ಮತ್ತೆ ಆಡಬೇಕು ನಾಲ್ವರ ಪುಟ್ಟ ಜಗದಿ
ಸಹೋದರರ ಚೇಷ್ಟೆ ಚಂದ
ಅಪ್ಪುವಿನ ನಗು ಚಂದ!!
ಮುಗ್ದ ಮನಸ್ಸುಗಳ ಜೊತೆ ಸೇರುತ್ತಿದ್ದೆವು ಅಂದು
ಆದರೆ ಎಲ್ಲರೂ ಹಾದಿ ದೂರ ದೂರ ಇಂದು
ಅಂದು ಒಂದು ಕಪಿಯ ತರಹ
ಇಂದು ನೆನಪುಗಳನ್ನು ಮೂಡಿಸುತ್ತಿದೆ ನನ್ನ......ಬರಹ!!!
ರಚನೆ: ಮಾಲಾಶ್ರೀ
- Akshatha Shetty
07 Jan 2021, 03:08 pm
Download App from Playstore: