ತಂದೆ ತಾಯಿ
ದೇವರು ದೇವರು
ನಿನ್ನ ಹೆತ್ತು ಹೊತ್ತು
ಸಾಕಿ ಸಲಹಿ ಬೆಳೆಸಿದ
ನಿನ್ನ ತಂದೆ ತಾಯಿಯೇ
ನಿನ್ನ ದೇವರು
ಗುಡಿ ಗೂಂಡಾಂತರ
ಸುತ್ತಿ ಸುಸ್ತಾಗಬೇಡ
ಆ ದೇವರು ಈ ದೇವರೆಂದು
ಕಲ್ಲು ಬಂಡೆಗೆ ತಲೆ ಚಚ್ಚಿ
ನಂಬಿ ಮೋಸ ಹೋಗಬೇಡ
ಮುಕ್ತಿ ಮೋಕ್ಷಕ್ಕಾಗಿ
ಕ್ಷೇತ್ರ ಕ್ಷೇತ್ರ ಪುಣ್ಯ ಕ್ಷೇತ್ರ
ಅಲೆದಾಡಿ ಪರದಾಡಿ
ಕಲ್ಲು ಗೊಂಬೆಯ ಮುಂದೆ
ಬಿದ್ದು ಬೆಡಬೇಡ
ನೀ ಹುಟ್ಟಿ ಬೆಳೆದು ಆಡಿ ಬಂದ
ಗುಡಿಯಲ್ಲಿರುವರು
ನಿನಗೆ ಜನ್ಮ ಕೊಟ್ಟ ದೇವರು
ನಿನ್ನ ತಂದೆ ತಾಯಿಯೇ
ನಿನ್ನ ದೇವರು ಮರೆಯಬೇಡ
ಜೀವವಿಲ್ಲದ
ತಿನ್ನಲಾಗದ ಕಲ್ಲಿಗೆ
ಗುಡಿಯ ಮೇಲೆ ಗುಡಿ ಕಟ್ಟಿ
ಹಣ್ಣು ಕಾಯಿ ಹೋಳಿಗೆ
ಕಡುಬಿನ ಎಡೆ ಇಟ್ಟು
ಹಾಲು ತುಪ್ಪ ಗಂಧದ
ಚಂದನದ ಅರಿಶಿಣದ
ಎಳೆನೀರು ಸುರಿದು
ಕಳೆಯಬೇಡ
ನಿನ್ನ ಹೆತ್ತು ಹೊತ್ತುವರಿಗೆ
ಅನ್ನ ನೀರು ಕೊಟ್ಟು
ಪ್ರೀತಿಸಿ ಪೂಜಿಸಿ ಆರಾಧಿಸು
ನಿನ್ನ ದೇಹದ ಕೊನೆ
ಉಸಿರು ಇರುವ ತನಕ
ಅಂದೇ ಸಿಗುವುದಯ್ಯಾ
ನಿನಗೆ ಸ್ವರ್ಗಕ್ಕಿಂತ ಮಿಗಿಲಾದ
ಬೆಲೆ ಕಟ್ಟಲಾಗದ
ಶ್ರೇಷ್ಠ ಸ್ವರ್ಗ ಸುಖವಯ್ಯಾ
- ರಾಜು ಹಾಸನ
08 Jan 2021, 08:57 am
Download App from Playstore: