ಓ ಕಂದ

ಓ ಕಂದ ಓ ಕಂದ
ಓ ನನ್ನ ಕಂದ
ನೀ ಊರು ಕೆರಿಗೆ
ಅಧಿಕಾರಿಯಾಗದಿದ್ದರು
ದುಡ್ಡಿನ ಮದ ತುಂಬಿದ
ದೊಡ್ಡವನಾಗದಿದ್ದರು
ನೀ ನಾಲ್ಕು ಅಕ್ಷರ
ಓದು ಬರಹ ಕಲಿತು
ಸ್ವಾಭಿಮಾನದ
ಮಗುವಾಗು
ಗಿಡವಾಗಿ ಬೆಳೆದು
ಮರವಾಗಿ ನಿಂತು
ದಣಿದು ಬಂದವರಿಗೆ
ದಣಿವು ನೀಗಿಸುವ
ಮರದ ನೆರಳಾಗು
ನಿನ್ನ ನಂಬಿದ ಜನರ
ಬದುಕು ಕಾಯುವ
ಕಾವಲುಗಾರನಾಗು
ಕೈ ಹಿಡಿದು ನಡೆಸುವ
ಮುನ್ನೆಡೆಸುವ ನಾಯಕನಾಗು
ಓ ಕಂದ ಓ ಕಂದ
ಓ ಕಂದ ನನ್ನ ಕಂದ

- ರಾಜು ಹಾಸನ

08 Jan 2021, 02:53 pm
Download App from Playstore: