ಕಾಲ

ಹಿಂದೊಂದು ಕಾಲವಿತ್ತು
ವರ್ಣ ಬೇಧದ ಕಾಲ
ಇಂದೊಂದು ಕಾಲವಿದೆ
ಸಮಾನತೆಯ ಕಾಲ
ಹಿಂದೊಂದು ಕಾಲವಿತ್ತು
ನನ್ನವರು ತನ್ನವರೆಂದರೆ
ತಬ್ಬಿ ಅಪ್ಪಕೊಳ್ಳುವ ಕಾಲ
ಇಂದೊಂದು ಕಾಲವಿದೆ
ನನ್ನವರು ತನ್ನವರೆಂದರೆ
ತಳ್ಳಿ ತೆಗಳುವ ಕಾಲ
ಹಿಂದೊಂದು ಕಾಲವಿತ್ತು
ಸಂಬಂಧಗಳೆಂದರೆ
ಸಡಗರ ಸಂಭ್ರಮದ ಕಾಲ
ಇಂದೊಂದು ಕಾಲವಿದೆ
ಸಂಬಂಧಗಳೆಂದರೆ
ಸಪ್ಪೆ ಮೋರೆಯ ಕಾಲ
ಹಿಂದೊಂದು ಕಾಲವಿತ್ತು
ಬಂಧು ಬಳಗ ಬಂತ್ತೆಂದರೆ
ಬರಮಾಡಿಕೊಳ್ಳುವ ಕಾಲ
ಇಂದೊಂದು ಕಾಲವಿದೆ
ಬಂಧು ಬಳಗ ಬರುವರೆಂದು
ಬಾಗಿಲು ಮುಚ್ಚಿಕೊಳ್ಳುವ ಕಾಲ

ಹಿಂದೊಂದು ಕಾಲವಿತ್ತು
ಸಂಬಂಧಕ್ಕೆ ಬೆಲೆಕೊಟ್ಟು
ಸಿರಿ ಸಂಪತ್ತಿಗೆ
ಬೆಲೆಕೊಡದ ಕಾಲ
ಇಂದೊಂದು ಕಾಲವಿದೆ
ಸಂಬಂಧಕ್ಕೆ ಬೆಲೆ ಕೊಡದೆ
ಸಿರಿ ಸಂಪತ್ತಿಗೆ
ಬೆಲೆಕೊಡುವ ಕಾಲ
ಹಿಂದೊಂದು ಕಾಲವಿತ್ತು
ಪ್ರೀತಿ ಪ್ರೇಮ ಮಮತೆ
ತುಂಬಿದ ಕಾಲ
ಇಂದೊಂದು ಕಾಲವಿದೆ
ಮದ ಮತ್ಸರ ಮೋಹ
ತುಂಬಿದ ಕಾಲ
ಹಿಂದೊಂದು ಕಾಲವಿತ್ತು
ಜನರು ಬದಲಾದರೂ
ಭಾವನೆ ಒಂದೇ ಇದ್ದ ಕಾಲ
ಇಂದೊಂದು ಕಾಲವಿದೆ
ಜನರು ಬದಲಾದಂತೆ
ಭಾವನೆ ಬದಲಾಗುವ ಕಾಲ

- ರಾಜು ಹಾಸನ

10 Jan 2021, 08:24 am
Download App from Playstore: