ಅ_ಉ_ಪಾಕಾರಿ

ಕೈ ಕೆಸರಾದರು
ಮೈ ಮಸಿಯಾದರು
ಅಡಿ ಮುಡಿ
ಮಣ್ಣಾದರು
ಗುಣ ದಾನದಲ್ಲಿ
ಅಪ್ಪಟ ಅಂಪರಂಜಿ
ಬಂಗಾರದ ಮನುಷ್ಯ
ಉಕ್ಕಿನ ಮನುಷ್ಯ ರೈತ

ಬೇವರು ಹರಿಸಿ
ಶ್ರಮವಹಿಸಿ
ಕಣ್ಣೀರ ವರೆಸಿ
ಹಸಿದ ಜನರ
ಹಸಿವು ನೀಗಿಸಿ
ದಣಿವು ತಣಿಸಿದ
ಅನ್ನದ ಧಣಿ
ರೈತ ಗಣಿ
ನಮ್ಮ ನಿಮ್ಮೆಲ್ಲರ
ಕಣ್ಣ್ ಮಣಿ

ಗಾಳಿ ಮಳೆಗೆ
ಬಿಸಿಲು ಬೆಂಕಿಗೆ
ಗುಡುಗು ಸಿಡಿಲಿಗೆ
ಬದುಕು ಬಂಡಿ
ಚಿಂದಿ ಚಿಂದಿ
ಚಿಂದಿಯಾದರು
ದೇಶದ ಜನರಿಗೆ
ಚಿನ್ನ ಚಿನ್ನ ಚಿತ್ರಾನ್ನ
ಹಿಟ್ಟು ಮುದ್ದೆ
ಗಂಟ್ಟು ಮೂಟೆ ಕೊಟ್ಟು
ಉಳಿಸಿ ಬೆಳಸಿದ
ಚಿನ್ನದ ಗುಣದವನು ರೈತ

ಚಿಂದೀ ಹಾಯ್ದರು
ಕೈ ಚಾಚಿ ಭಿಕ್ಷೆ ಬೇಡದೆ
ಪರರಿಗೆ ಉಪಾಕಾರಿಯಾಗಿ
ಹಿಂದೆ ಮುಂದೆ ಯಾರೇ
ಬಂದರು ಬರದಿದ್ದರು
ನನ್ನವರು ತನ್ನವರು ಯಾರೇ
ಇದ್ದರು ಇಲ್ಲದಿದ್ದರು
ಕುಂತು ಕುರದೆ ನಿಂತು
ನಿಲ್ಲದೆ ದುಡಿದು
ದೇಶಕ್ಕೆ ಅನ್ನವನಿಟ್ಟ
ಪರೋಪಾಕಾರಿ ಜೀವಿ
ಮಾನವ ಬಂಧು ರೈತ

ನಮ್ಮ ಜೀವಾ
ಬದುಕು ಕಾಣ್ಣೋ
ಈ ದೇಶದ ಆಸ್ತಿ
ಉಸಿರು ಕಾಣ್ಣೋ
ನಮ್ಮ ಬಂಧು ಮಿತ್ರ
ಆಪ್ತಮಿತ್ರ ಕಾಣ್ಣೋ
ಮಣ್ಣಿನ ಮಗ
ರೈತ ಕಾಣೋ


ಜಾತಿ ಧರ್ಮದ
ಕೋಟೆ ಕಟ್ಟಿ
ಮೇಲು ಕೀಳಿನ
ಗೋಡೆ ಕಟ್ಟಿ
ಆಚಾರ ವಿಚಾರದ
ಕಥೆಯ ಕಟ್ಟಿ
ದೇಶ ದ್ರೋಹದ
ಪಟ್ಟ ಕಟ್ಟಿ
ದ್ವೇಷ ಅಸೂಯೆ
ಜನರ ತಲೆಗೆ ಕಟ್ಟಿ
ದೇಶಕ್ಕೆ ಬೆಂಕಿ ಇಟ್ಟು
ಇಡೀ ದೇಶವನ್ನೇ
ದಗದಗನೇ ದಗದಗನೆ
ಹೊತ್ತಿ ಉರಿಸಿ
ಪಟ್ಟದಾಸೆಗೆ
ಚಟ್ಟಕ್ಕೇರಿದ
ಪುಂಡ ಪೋಕರಿ
ದಂಡ ಪಿಂಡ
ಮನುವಾದಿಗಳು
ಹಿಂದು ಮುಂದು
ಎಂದೆಂದಿಗೂ
ಮಾರಿ ಮಾರಿ
ಊರು ಕೇರಿಗೆ
ಮಹಾಮಾರಿ ಹೆಮ್ಮಾರಿ
ಅಪಕಾರಿ ಅಪಕಾರಿ
ದೇಶ ಕೋಶಕ್ಕೆ
ಅಪಾಯಕಾರಿ
ಎಚ್ಚರ ಎಚ್ಚರ ಎಚ್ಚರ

- ರಾಜು ಹಾಸನ

12 Jan 2021, 09:29 am
Download App from Playstore: