ಹಬ್ಬ ಹರಿದಿನ
ಭೂಮಿ ಬರಡಗಿ
ಕೆರೆ ಕಟ್ಟೆ ಒಣಗಿ ಬತ್ತಿ ಬಾಡಿ
ಖಾಲಿಯಾಗಿ ಕಾದು ಕುಂತಿದೆ
ಮಳೆರಾಯನ ಮುತ್ತಿನ
ಮಳೆ ಹನಿಗಳ ಚುಂಬನಕ್ಕೆ
ಗಿಡ ಮರಗಳ ರೆಂಬೆ ಕೊಂಬೆ ಉರುಳಿ
ಹೂವು ಕಾಯಿಯಾಗಿ
ಎಲೆ ಚಿಗುರು ಹೊಡೆಯುವ ಮಾಸ
ಹಳೆ ಮಾಸ ಕಳೆದು
ನವ ಮಾಸ ಬಂದಿದೆ ವಸಂತ ಮಾಸ
ತಂದು ಬಂದು ಕೊಟ್ಟಿದೆ
ಮಾಸ ಮಾಸಗಳು ದುಡಿದು ಬೆಂದ
ದುಡಿಮೆಯ ಧಣಿಗೆ
ದಣಿವು ತಣಿಸುವ ಮಾಸ
ರೈತ ಮಿತ್ರ ಬಂಡಿ ಎತ್ತು
ಉಳುಮೆ ಎತ್ತುಗಳ ಮೈ ಬಾರ
ಮೈ ಬರೆ ಮಾಸುವ ಮಾಸ
ಕೊಬ್ಬು ಕರಗಿದ ದೇಹಕ್ಕೆ
ಕೊಬ್ಬರಿ ಎಳ್ಳು ಬೆಲ್ಲ
ಕಬ್ಬು ಜೀರಿಗೆ ಜಿಗಿಯುವ ಮಾಸ
ಉಳ್ಳವರು ಮಂದಿರ ಆಲಯ
ಕಲ್ಲು ಕಂಬ ಸುತ್ತಿ ತಿರುಗುವ ಮಾಸ
ಇಲ್ಲದವರು ದುಡಿಮೆ ಹರಸಿ
ಸುತ್ತಿ ತಿರುಗಿ ದುಡಿದು ಹೊಟ್ಟೆ ಬಟ್ಟೆ
ಜುಟ್ಟಿಗೆ ಹೊಂದಿಸುವ ಮಾಸ
ಉಳ್ಳವರಿಗೆ ಸಂಭ್ರಮ ಆಚಾರಣೆ
ಇಲ್ಲದವರಿಗೆ ಹಸಿವಿನ ಜಾಗರಣೆ
ಉಳ್ಳವರಿಗೆ ಹಬ್ಬ ಹರಿದಿನಗಳ ಚಿಂತೆ
ಇಲ್ಲದವರಿಗೆ ಹೊಟ್ಟೆ ಬಟ್ಟೆಯ
ಗಂಟ್ಟು ಹಿಟ್ಟು ಬಡತನದ ಚಿಂತೆ
**********ರಾಜು ಹಾಸನ*********
- ರಾಜು ಹಾಸನ
14 Jan 2021, 11:16 am
Download App from Playstore: