ಮನವೆ
ಯಾಕಿಷ್ಟು ಮೌನಿ
ಒತ್ತಡದ ನಗುವೇಕೆ
ಆತುರದ ಮಾತೇಕೆ!
ಯಾರನ್ನೋ ಮೆಚ್ಚಿಸಲು ಸಹಸವೇಕೆ?
ನಡೆದಿರುವುದೆಲ್ಲವು ನಿಜವೇ
ಮರೆಮಾಚುವ ಪ್ರಯತ್ನಗಳೇಕೆ!
ಯಾರಿಲ್ಲದ ಊರಿನಲ್ಲಿ
ಹಾಡುಗಳ ಸಾಲೇಕೆ?
ಮದ್ಯಸ್ತಿಕೆಯ ಚಂದ್ರ
ಬರುವನೇ ನೋವ ಮರೆಸಲು!
ಭರವಸೆಯ ಬೆನ್ನತ್ತಿ
ಏನ ಸಾಧಿಸಲು ಹೊರಟಿರುವೆ?
ಅಲೆಗಳ ಮೊರೆತ
ಕೇಳುವುದೇ ಇಂದಿಗೂ?
ದಿಗಂತದಂಚಿನಲ್ಲಿ ಕುಳಿತು
ಭಾವಗಳ ಹೆಜ್ಜೆ ಗುರುತ
ಎಣಿಸುವುದೆ ಮುಂದಿನ ಬದುಕು!!!
@ವಿನಯ್
- ವಿನಯ್ ಪ್ರತಾಪ್
14 Jan 2021, 12:20 pm
Download App from Playstore: