ಸ್ನೇಹಿತ

ಆ ದೂರದ ತೀರವನು ಸೇರಲು ನಾನು
ಹರಿಗೋಲ ಅಂಬಿಗನು ನೀನಾಗಿ ನಿಂತೆ
ದಡಸೇರುತ್ತಿದ್ದಂತೆ ಕಣ್ಣೀರು ಹರಸುತಲಿ ಬೀಳ್ಕೊಟ್ಟು ಭಾವದಲಿ ಬಿಗಿದಪ್ಪಿ ನಿಂತೆ //

ಹೋಗೋದು ಹೋಗ್ತಿಯ ಮಗನೆ ನೀನು
ಆಗಾಗ ಫೋನ್ ಮಾಡ್ಲೆ ಅಂತಂದೆ ನೀನು
ಬೆಂಕಿಯ ಇಟ್ಟಂಗೆ ಬೆನ್ನಿಗೆ ಹೊಡೆದೊಮ್ಮೆ
ಕೊನೆವರೆಗೂ ಸ್ನೇಹದ ನೆನಪಿರಲಿ ಎಂದೆ //

ಬಾಲ್ಯದ ಆಟ, ಹುಡುಗಾಟ ಗಳೆಲ್ಲವೂ
ಮರೆಯಲಾರದ ಸಿಹಿ ನೆನಪಾಗಿ ನಿಂತು
ಬದುಕು ಸಾಗಿಸಲು ಹೆಣಗುವ ಜನಕಿಂತ
ಆ ಬಾಲ್ಯ ದಾಟದ ಸುಖ ಚಂದ ವೆಂದೆ //

ತಿಂಗಳಲೊಮ್ಮೆ ಫೋನ್ ಮಾಡಿದ್ರೆ ಸಾಕು
ಮೊದಲು ಬೈಗುಳ ಸಾಲು ನಂತರ ಮಾತು
ಭಾವ ಪರವಶನಾಗಿ ಇಹಲೋಕ ಮರೆತು
ಪರಲೋಕ ಫೋನಲ್ಲಿ ಸುತ್ತಿಸಿನಗುವಾತ //

ಸ್ನೇಹದಲಿ ಅಡಗಿದ ಪ್ರೇಮವೆಂದು ಅಮರ
ಸಿರಿ, ಸಂಪತ್ತು ಗಳಿಗಿಂತಾ ಸ್ನೇಹವು ಮೇಲು
ಸ್ನೇಹಿತನ ಒಡನಾಟ ಕಹಿ,ಸಿಹಿ ಮಾತುಗಳು
ಮತ್ತೆ ಮತ್ತೆ ಕರೆಯುತ್ತಲಿರುವುದು ಕೂಗಿ //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

14 Jan 2021, 10:15 pm
Download App from Playstore: