ಬೊಗಸೆ ನೀರು

ಕಲ್ಲು ಕಂಬದ ಗೊಂಬೆಗೆ
ಹಾಲು ಮೊಸರು
ಬೆಣ್ಣೆ ತುಪ್ಪ
ಸುರಿದು ಕಳೆಯುವ
ಮೂಢ ಜನರು
ದಣಿದ ಜನರು
ಜೀವ ತಣಿಸಲು
ನೀರು ಕೇಳಿದರೆ
ಮಡಿ ಮೈಲಿಗೆ ಎಂದು
ನಿರಾಕರಿಸಿ ದೂರಸರಿದು
ಬೊಗಸೆ ನೀರು
ಸುರಿದು ಎರಚುವರಯ್ಯಾ
ನೀಚ ಮನಸಿನ
ಮೂಢ ಜನಗಳು
ದಣಿದವರಿಗೆ ನೀರು
ಕೊಡದ ಮೂಢ ಜನರಿಗೆ
ದಣಿದ ವ್ಯಕ್ತಿ ಬೆವರು ಸುರಿಸಿ
ದುಡಿದು ಕೊಟ್ಟ ಅನ್ನ ಮಾತ್ರ
ಇವರ ಹೊಟ್ಟೆಗೆ ಬೇಕಯ್ಯಾ
ಇದು ಯಾವ ಧರ್ಮವೂ

- ರಾಜು ಹಾಸನ

15 Jan 2021, 04:42 pm
Download App from Playstore: