ಮೋಕ್ಷ
ಮೂರು ಮಕ್ಕಳ ಹಡೆದವ್ವ ತಾಯಿ
ಮುತ್ತಿನ ಚಂಡಿನ ಹಾಂಗ
ಮುಪ್ಪಿನ ಕಾಲಕ ಮಗ್ಗುಲಕ್ಕಿದ್ದ ನಿನ್ನ
ಜೋಪಾನ ಮಾಡಲಂತಾ
ಶಾಲೆ ಕಲಿಯಲಂತ ಉಪವಾಸ ಬಿದ್ದು
ಅವರಿಗೆ ವಿಧ್ಯ ಕೊಡಿಸಿದವ್ವ
ಕೂಲಿ ನಾಲಿ ಗದ್ದೆ ಕೆಲಸ ಮಾಡುತ
ಮಕ್ಕಳ ಹೊಟ್ಟೆ ತುಂಬಿಸಿದವ್ವ
ಪೊಲೀಸ್, ಲಾಯರ್,ರಾಜಕಾರಣಿ
ಮಾಡೋ ಕನಸನು ಕಂಡೆವ್ವ
ತವರ ಬಂಗಾರ ಮಾರಿ ಅವರಿಗೆಲ್ಲಾ
ಸಮಾಜದ ಮುಂದೆ ತಂದೆ ಅವ್ವ
ವಯಸ್ಸಿಗೆ ಬಂದಾರಂತ ಹೆಣ್ಣ ಹುಡುಕಿ ಮದುವೆಯ ಮಾಡಿದವ್ವ
ಕಂಡ ಕಲ್ಲಿಗೆ ಕೈಯನು ಮುಗಿಯುತ
ಕಾಯಕ ಮಾಡಿದೇವ್ವ
ಬಂದ ಸೊಸೆಯಂದಿರು ಕೂಡಿಬಾಳದ
ಮನೆಬಿಟ್ಟು ಹೋದರವ್ವ
ಸಾಯುವಾಗಲೂ ಬಾರದ ಮಕ್ಕಳ ನೆನೆದು
ಮೊಕ್ಷವ ಪಡೆದವ್ವ ಅವ್ವಾ.
ಕಲ್ಮೇಶ ಬಡಿಗೇರ
9743539657
.....ಬಾದಾಮಿ.....
- Kalmesh Badiger
16 Jan 2021, 06:02 pm
Download App from Playstore: