ಕವನ

ಕವನದ ಸಾಲುಗಳು
ಕಲ್ಪನೆಯಾದರೆ ಕೇವಲ
ಕನಸು ಮನಸ್ಸಿಗೆ
ಅಂದ ಚಂದವಷ್ಟೇ
ಕವನದ ಸಾಲುಗಳು
ಅಂಧಕಾರ ಮೂಢನಂಬಿಕೆ
ಕಡೆಗಣಿಸಿ ಕೊನೆಗಾಣಿಸಿ
ಉಳುಕು ತಳುಕು ಇಲ್ಲದ
ತಿರುಳು ತುಂಬಿದ
ಜ್ಞಾನದ ಸಾರವಾದರೆ
ಸಮಾಜ ತಿದ್ದುವ
ಆಯುಧವಾಗುವುದು

- ರಾಜು ಹಾಸನ

19 Jan 2021, 11:17 am
Download App from Playstore: