ಜನುಮದಿನದ ಶುಭಾಶಯ
ಶುಭಾಶಯ ನಮ್ಮ ಹೃದಯದಿಂದ
ನಿಮ್ಮ ಜನುಮದಿನದ ಶುಭಾಶಯ
ನೂರಾರು ವರುಷ ಸುಖವಾಗಿ ನೀವು
ನಗು ನಗುತ ಇರಿರೆಂದು ಶುಭಾಶಯ //ಪ//
ಮೃದು ಮನಸು ಸಿಹಿ ಮಾತು ಆಡ್ವ
ಮಂಜುನಾಥ ಗುರುವೆ ಶುಭಾಶಯ
ಪ್ರಾಣಿಗಳನು ಸಾಕಿ ಪೋಷಿಸುವಂತ
ಮಹಾಪುರುಷ ನಿಮಗೆ ಶುಭಾಶಯ //೧//
ಅಸಹಾಯಕ ಜನಗಳ ಸಲಹುತಲಿ
ಅನ್ನದಾನ ಮಾಡಿ ದೀನದಲಿತರಿಗೆಲ್ಲಾ ಆಶಾಕಿರಣವಾಗಿ ನಿಂತ ಮಹಾಗುರುವೆ
ನಿಮಗೆ ನಾವು ಕೋರುವ ಶುಭಾಶಯ //೨//
ದಲಿತೋದ್ದಾರಕರಾಗಿ ಬಂದ ಗುರುವೆ
ಸಮಾಜದ ಸೇವೆಯಲ್ಲಿ ಮುಂದೆ ನೀವೆ
ಆದಿ ಕರ್ನಾಟಕ ಮೂಲ ದೊಡೆಯ ನೀವು
ಅನ್ನದಾನ ಗುರುವೆ ನಿಮಗೆ ಶುಭಾಶಯ //೩//
ಶುಭಾಶಯ ನಿಮಗೆ ಶುಭಾಶಯಗಳು
ನಿಮ್ಮ ಜನುಮದಿನದ ಹಾರ್ಧಿಕವಾದ
ನೂರು ನೂರಾರು ಶುಭಾಶಯಗಳು
ಮತ್ತೊಮ್ಮೆ ನಿಮಗೆ ಶುಭಾಶಯಗಳು //೪//
ಕಲ್ಮೇಶ ಬಡಿಗೇರ
.........ಬಾದಾಮಿ.......
...........9743539657........
- Kalmesh Badiger
20 Jan 2021, 08:05 pm
Download App from Playstore: