ನನ್ನ ಜನಗಳು

ಜನರ ಮತ ಪಡೆದು
ಕೊಂದಿದ್ದು ಆಯ್ತು ಜನರ ಬದುಕು
ಊರು ರಾಜ್ಯ ದೇಶದ
ಆಸ್ತಿ ಪಾಸ್ತಿ ಕೊಳ್ಳೆ ಹೊಡೆದು
ಮಾರಿದ್ದು ಆಯ್ತು
ಬಡ ಜನರ ಬದುಕು ಮೂರಾಬಟ್ಟೆ
ಮಾಡಿದ್ದು ಆಯ್ತು
ದೇಶದ ಬೆನ್ನೆಲುಬು ರೈತರ
ಬೆನ್ನು ಮೂಳೆ ಮುರಿದಿದ್ದು ಆಯ್ತು
ಸುಳ್ಳು ಹೇಳಿ ಕಥೆಯ ಕಟ್ಟಿ
ಜನರ ನಂಬಿಸಿ
ಜನರ ದಿಕ್ಕು ತಪ್ಪಿಸಿದ್ದು ಆಯ್ತು
ರಾಜ್ಯ ದೇಶವೇ ಬಂಡವಾಳ
ಶಾಹಿಗಳ ಕೈ ಸೇರಿದ್ದು ಆಯ್ತು
ಬಡವನ ಉದ್ಯೋಗದ
ಕನಸಿಗೆ ತಣ್ಣೀರು ಹಾಕಿದ್ದು ಆಯ್ತು
ದೇಶವನ್ನೇ ದೇವರು
ಧರ್ಮವೆಂದು ಹೊಡೆದು
ಸಾಯಿಸಿದ್ದು ಆಯ್ತು
ಇನ್ನು ಉಳಿದಿರುವುದು ಒಂದೇ
ಈ ದೇಶದ ಜನರ
ಕಂಡವರ ದೇಶಕ್ಕೆ ಮಾರುವುದು
ಒಂದು ಬಾಕಿಯಿದೆ
ಎಚ್ಚರ ಎಚ್ಚರ ನನ್ನ ಜನಗಳೇ
ಮನುವಾದಿ ಗುಲಾಮಗಿರಿಗೆ
ಬುದ್ದಿ ಕಲಿಸಿ ಊರು ದೇಶದಿಂದ
ಒದ್ದು ಓಡಿಸಿದರೇ
ಈ ದೇಶದ ಮೂಲ ನಿವಾಸಿಗಳಿಗೆ
ಉಳಿಗಾಲ ಇಲ್ಲದಿದ್ದರೆ
ಮೂಲ ನಿವಾಸಿಗಳಿಗೆ ಕೊನೆಗಾಲ

- ರಾಜು ಹಾಸನ

31 Jan 2021, 12:36 am
Download App from Playstore: