ಎಚ್ಚರ ಎಚ್ಚರ

ಚಿಲ್ಲರೆ ಕಾಸಿಗೆ
ಚಿಲ್ಲರೆ ನೋಟಿಗೆ
ವೋಟು ಕೊಟ್ಟು
ಬೂಟು ನೆಕ್ಕಬೇಡಿ
ಮುಂದೊಂದು ದಿನ
ಬೀಳುವುದು ಮೆಟ್ಟಿನೆಟ್ಟು
ಅಂದು ಬಿಡಬೇಕಾಗುವುದು
ಕಣ್ಣು ಬಾಯಿ ಎಚ್ಚರ ಎಚ್ಚರ
ಜಾತಿ ಧರ್ಮದ
ಕಥೆಯ ಕಟ್ಟಿ ಜುಟ್ಟು ಹಿಡಿದು
ತಲೆಯ ಕಡಿಯುವರು
ಹೆಂಡ ಖಂಡ ಕೊಟ್ಟು
ಮಂಗನಾಟ ಆಡಿಸುವರು
ಮನುವಾದಿ ಕಮಂಗಿಗಳು
ಎಚ್ಚರ ಎಚ್ಚರ ಎಚ್ಚರ
ಮುಗ್ಧ ಜನಗಳೇ

ಮಂಗನ ಕೈಗೆ
ಮಾಣಿಕ್ಯ ಕೊಟ್ಟರು ಒಂದೇ
ಹೆಂಡ ಕೊಟ್ಟರು ಒಂದೇ
ಹಾಗೆಯೇ ಮನುವಾದಿ
ಮಂಗಗಳ ಕೈಗೆ
ರಾಜ್ಯ ಕೊಟ್ಟರು ಒಂದೇ
ದೇಶ ಕೊಟ್ಟರು ಒಂದೇ
ರಾಜ್ಯ ದೇಶ ಅಳಿಯಾದೆ
ಉಳಿಯುವುದೇ
ಮನುವಾದಿಗಳು ಪಠಿಸುವುದು
ಮಂತ್ರವಲ್ಲ
ಜನರ ಉರುಳಿಸುವ ತಂತ್ರ
ಇದ್ದನ್ನು ಅರಿಯದ
ಮುಗ್ಧ ಜನರು ಅತಂತ್ರ ಅತಂತ್ರ

ಬಗ್ಗೆ ಬಗ್ಗೆಯ
ತಿಂಡಿ ತಿನಿಸುಗಳು ಬೇಕು
ಬಕಾಸುರ ರಾಕ್ಷಸ
ಮನುವಾದಿಗಳ ಹೊಟ್ಟೆಗೆ
ಬಗ್ಗೆ ಬಗ್ಗೆಯ
ಬೆಳೆ ಬೆಳೆಯುವ
ರೈತರ ಗೋಳು
ಕಂಡು ಹಾಕಿಕೊಂಡರೆ
ಮನುವಾದಿಗಳು
ಬಾಯಿಗೆ ಮಣ್ಣು

- ರಾಜು ಹಾಸನ

04 Feb 2021, 01:06 pm
Download App from Playstore: