ಬಾಳ ಸಂಗಾತಿ
ಮಾಧುರ್ಯದ ಆ ನಿನ್ನ ಮಾತು
ನನ್ನ ಬಾಳಲ್ಲಿ ಮಂದಹಾಸವ ತಂದಿದೆ...
ಚಂದ್ರನನ್ನು ತಂದು ಕೈಗೆ ಇಡೆಲೇ ಎನ್ನಲಾರೆ
ಆ ಬೆಳದಿಂಗಳ ಕತ್ತಲಲ್ಲಿ ನಿನ್ನ ಕೈ ತುತ್ತು ತಿನ್ನುವಾಸೆ..
ಕತ್ತಲೆ ಆವರಿಸಿದ ನನ್ನೀ ಬಾಳಲ್ಲಿ
ಮಿಂಚಾಗಿ ಬಂದು ದೀವಿಗೆಯಂತೆ ಮನವ ಬೆಳಗಿಸಿದೆ...!
ಮೌನದಲ್ಲೆ ನನ್ಮನವನ್ನ ನಿನ್ನೆಡೆಗೆ ಸೆಳೆದೆ
ಮನ ಪೂರ ನೀ ಆವರಿಸಿ ನೆಲೆಯಾಗಿ ಕುಂತೆ.!
ಅದೇ ಎಷ್ಟೇ ಕಷ್ಟ ಬರಲಿ ನಮ್ಮ ನಡುವಿನ
ಪ್ರೀತಿಗೆ ಕೊನೆಯಾಗದಿರಲಿ...!
ಕಷ್ಟವೋ ಸುಖವೋ ನೆಮ್ಮದಿಯ ಜೀವನ
ಸಾಗಿಸಿಬಿಡುವ ನಿನಗೆ ನಾನು ನನಗೆ ನೀ ಎಂದು...!
ಮನದ , ಮನೆಯ ಒಡೆತಿಯಾಗಿ ಆಯ್ಕೆಯಾದೆ
ನನ್ನ ಆಯ್ಕೆ ಸರಿಯಾಗಿದೆ ಇಂದೂ ಎಂದೂ ಎಂದೆಂದಿಗೂ ನೀನೇ ನನ್ನ ಬಾಳ ಸಂಗಾತಿಯೆಂದೂ...!
ನಾವಾಗಬೇಕು ಸತಿ ಪತಿಯಾಗಿ ಎಂದೆಂದಿಗೂ
ಬರೆದೆ ನಾ ಇಂದೂ ನನ್ನೊಲವಿನ ಜೀವಕ್ಕೊಂದು
ನನ್ನೀ ಒಲವ ವರ್ಣಿಸಲು ಪದಗಳು ಸಾಲದು ಪುಟಗಳು ಎಣಿಸಲಾಗದು
ನನ್ಮನದ ಒಲವಿಗೆ ಪುಟ್ಟ ಉಡುಗೊರೆಗೆ ನಿನಗೆಂದು..!
ಇಂದಿಗೆ ಮಾತ್ರ ಸೀಮಿತವಲ್ಲ ಈ ಉಡುಗೊರೆ ಜೀವನ ಪೂರ ನೆನೆಪಿನ ಅಂಗಳದಲ್ಲಿ ನಮ್ಮ ಜೋಡಿ ರಾರಾಜಿಸಬೇಕು...
ಹೇ ಒಲವೇ ಹಿಡಿಸಿತೆ ನನ್ನೀ ಪುಟ್ಟ ಕವನ....!!
- sharan
16 Feb 2021, 08:29 am
Download App from Playstore: