ಬಂದುಬಿಡು

ನೀನಿರದ ಬರಿ ಸಂಜೆ
ಆಗಬಹುದು ಬಂಜೆ
ಬಾನ ಬಿಗುವಿನ ಆ ಮೌನ
ನಗುವಿಲ್ಲದ ನನ್ನ ಧ್ಯಾನ

ನೆನಪುಗಳು ಮರಳಲಾರವು
ನೀನಿರದ ಈ ಗೂಡಿಗೆ
ಕನಸುಗಳು ನನಸಾಗಲಾರವು
ಭಾವವಿರದ ಹಾಡಿಗೆ

ಒಲವಿನಾಗಸದಿ ಮೆಲ್ಲ
ವಿರಹ ಕತ್ತಲೆ ಕವಿಯುತಿದೆ
ಸರಿಯಿಲ್ಲದ ನಿನ್ನ ಸರಸವ
ನಿರ್ದಯಿಯಾಗಿ ಕವಿಯುತಿದೆ

ಏಕೆ ಈ ದೂರ
ಬಾಳೇ ನಿಸ್ಸಾರ
ನೀನಿಲ್ಲದ ಈ ವೇಳೆ
ನಿತ್ಯ ನೂರಾರು ರಗಳೆ

ಬಂದುಬಿಡು ನಲ್ಲ
ನೀ ಬೆಳದಿಂಗಳಾಗಿ
ಉಕ್ಕಿ ಬಿಡುವೆ ನಾನಾಗಲೇ
ಸಾಗರದ ಅಲೆಮಾರಿ, ,,,,,,,

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

14 Jul 2016, 10:54 pm
Download App from Playstore: