ಮನಕ್ಕೊಂದು ಪತ್ರ
Hey ಹುಚ್ಚು ಮನವೇ
ಯಾಕಿಷ್ಟು ನೊಂದಿರುವೆ...
ನೀ ಆಸೆಪಟ್ಟಿದ್ದೆಲ್ಲ ಸಿಗೋದಿಲ್ಲ,
ಕಾಣೋ ಕನಸ್ಸುಗಳೆಲ್ಲ ನನಸಾಗೊಲ್ಲ,
ಅವನ ಕೈ ಮೀರಿ ಏನು ನಡೆಯೊಲ್ಲ.
ಈ ಬದುಕ ಪಯಣದಲ್ಲಿ,
ನೋವು-ನಲಿವು ಕಾಳಗದಲ್ಲಿ....
ಸೋಲೇನೋ- ಗೆಲುವೇನೋ,
ಆಸ್ತಿನೋ-ಪಾಸ್ತಿನೋ,
ನೆಮ್ಮದಿ ಹೊರತು ಎನಿದ್ದರೇನು...?
ನಗುತಿರು ನೋವೇ ಇಲ್ಲ ಅನ್ನೋ ತರ
ಜೀವಿಸು ಕಷ್ಟಗಳೇ ಇಲ್ಲ ಅನ್ನೋತರ...
ಅವರವರ ಕಷ್ಟಗಳೇ ಅವರಿಗೆ ಅಪಾರ,
ನಿನ್ನ ನೋವು ಕೇಳುವವರು ಯಾರ....?
ನೊಂದ ಮನ, ಸೋತ ಮನ ಅದಷ್ಟೇ ನಿನ್ನದು!!
ತಿಳಿದುಕೊಂಡು ತಿಳಿಸಿಕೊಂಡು ಸಾಗುತಿರು....
ನಗುವುದ, ನಗಿಸುವುದ ಮರೆಯದಿರು!!!!!!
- saahithi
19 Apr 2021, 09:51 pm
Download App from Playstore: