ಅಮ್ಮನ ನೋವು

ನನ್ನ ಅಮ್ಮ ಕೇಳಿದಳು
ಎಲ್ಲರ ನೋವು-ನಲಿವು,ಆಸೆಗಳನ್ನ
ಆದರೆ ಹೇಳಲಿಲ್ಲ ಯಾರಲ್ಲೂ
ತನ್ನ ಆಸೆ ನೋವುಗಳನ್ನ.

ಮನಸ್ಸಿನ ತುಂಬಾ ಇದ್ದರೂ ನೋವು,
ತೋರಿಸುವಳು ಮುಖದ ತುಂಬಾ ನಗು.
ತನ್ನ ಜೀವನವು ಆಗಿದೆ ಚಿಂದಿಬಟ್ಟೆ
ಅದನ್ನು ಲೆಕ್ಕಿಸದೆ ಹೊಲಿದು ಕೊಡುವಳು ನಮೂನೆಯ ಬಟ್ಟೆ.

ಅವಳು ಜೀವನದ ಪೆಡಲ್ಲನ್ನು ತುಳಿಯುತ್ತ,
ಸಾಗಿಸುತ್ತಿದ್ದಾಳೆ ಬದುಕನ್ನ,
ಊರುಳಿಸುತ್ತಿದ್ದಾಳೆ ಇತಿಹಾಸದ ಚಕ್ರವನ್ನ.

ಅಮ್ಮನನ್ನು ನಂಬಿ ಬದುಕುತ್ತಿರುವ ಮಕ್ಕಳು,
ಅವರನ್ನು ನೋಡಿ ನೋವನ್ನು ಮರೆತು ನಕ್ಕಳು.
ಆದರೆ ಆ ಮಕ್ಕಳ ಬಗ್ಗೆ ಹುಟ್ಟಿತು ಚಿಂತೆ
ಮುಂದೆ ಅವರ ಬದುಕು ಹೇಗೆ ನಾ ಸತ್ರೆ.

ಅಮ್ಮನೇ ಕುಟುಂಬದ ಕಣ್ಣು.
ಎಲ್ಲರಿಗೂ ದೊರೆಯುವ ಹಲಸಿನ ಹಣ್ಣು.
ಮರಭೂಮಿಯಲ್ಲು ಸಿಗುವ ಹಸಿರು ಮಣ್ಣು.

- saahithi

19 Apr 2021, 09:55 pm
Download App from Playstore: