*ನನಗೂ ತಾಯಿ ಬೇಕೆನಿಸುತ್ತಿದೆ*

ನನಗೂ ತಾಯಿ ಬೇಕು
ನನ್ನ ಎತ್ತಿ ಮುದ್ದಾಡುವ
ತಿಂಡಿ ತಿನ್ನಿಸಿ ಊಟ ನೀಡಿ
ನೀರು ಕುಡಿಸಿ ಸಂತೃಪ್ತಿ ಪಡುವ
ನನ್ನನ್ನು ನೋಡಿ ಆನಂದಿಸುವ ತಾಯಿ ಬೇಕು ಎನಿಸುತ್ತದೆ.

ನೀನಿಲ್ಲದ ಮೂರುದಶಕಗಳ
ಬದುಕು ಬರಡು ಎನಿಸುತ್ತಿದೆ
ಅಸಾಯಕತೆ, ಏಕಾಂಗಿತನಗಳ
ಸವಾಲುಗಳನ್ನು ಎದುರಿಸಿ
ಬದುಕು ಸಾಕೆನಿಸುತ್ತಿದೆ.

ನೀನಿಲ್ಲದ ಬದುಕಿನಲ್ಲಿ
ತಪ್ಪಿತಸ್ಥ ಎಂಬ ಭಾವದಲ್ಲಿ
ಬದುಕುತ್ತಿರುವೆ, ನೀನಿದ್ದರೆ ತಪ್ಪು ಮಾಡಿದಾಗ ಕಿವಿ ಹಿಂಡುತ್ತಿದ್ದೆ
ಸಲಹೆನೀಡಿ ಸಲುಹುತ್ತಿದ್ದೆ.

ನಮ್ಮನ್ನು ಏಕೆ ಬಿಟ್ಟು
ಹೋಗಿರುವೆ ಅಮ್ಮ,
ನೀ ಮಾಡಿದ ಬಿಸಿಯೂಟದ
ಕೈ ತುತ್ತು ತಿನ್ನುವಾಸೆ,
ನಿನ್ನ ಮಮತೆಯ ಮಡಿಲಲ್ಲಿ
ಮಲಗುವ ಆಸೆ,
ನನ್ನನ್ನು ಬರಸೆಳೆದು ಮುದ್ದಾಡಿದೊಡೆ ರೋಮಾಂಚನಗೊಳ್ಳುವ ಆಸೆ,
ನಿನ್ನ ಭಾವ ಬೆಸುಗೆಯ ಬಂಧನದಲ್ಲಿ ಕನಸು ಕಾಣುವ ಆಸೆ.

ನೀನು ಇಲ್ಲದಿದ್ದರೂ ನಿನ್ನ ಪರಿಶ್ರಮದ ಹೋರಾಟದ ಬದುಕಿಗೆ ಜಯ ತಂದುಕೊಟ್ಟವರು ನಾವು.
ನಿನ್ನ ಹೆಸರು ಉಳಿಸಿದವರು
ನಿನ್ನ ಕೀರ್ತಿ ಬೆಳೆಸಿದವರು,
ನೀ ಜೀವಂತವಾಗಿದ್ದರೆ ನಮ್ಮ ಜಯವ ನೋಡಿ ಖುಷಿ ಪಡುತ್ತಿದ್ದೆ
ಸಂಭ್ರಮದಿ ಸಡಗರಪಡುತ್ತಿದ್ದೆ.
ನನಗೂ ತಾಯಿ ಬೇಕೆನಿಸುತ್ತಿದೆ.
✍️✍️ಮಹೇಶ್... ಶಿಕ್ಷಕರು

- MAHESH.हिन्दीशिक्षक

28 Apr 2021, 11:14 pm
Download App from Playstore: