ಪ್ರಕೃತಿಯ ಕ್ರೂರ ನೋಟ

ಕೋಪಗೊಂಡ ಪ್ರಕೃತಿಯ ಕ್ರೂರ ನೋಟ
ಸುಡುತಿದೆ ಮಾನವರಿಗೆ ಅರಿವಿಲ್ಲದ ಆಟವ
ಹಿಂದೆ ಸಾವಿರ ಕಷ್ಟಗಳ ನಡುವೆ
ನೆಲೆಸಿತ್ತು ಮನೆಯೊಳಗೆ ಐಕ್ಯತೆಯ ಭಾವ
ಸ್ಮರಿಸದಾದೇವು ಇಂದು ಅಂತಹ ಚೈತನ್ಯ ತುಂಬುವ ಸಹೃದಯಿಗಳ ಒಲವ
ಅನುಬಂಧದ ಅನುರಾಗದಿ ಅರಳಿದಂತ ಹೂವ
ಗೋಚರಿಸದ ಕೊರ ನದ ಸಿಡಿಲಿನ ಬಯಕೆ
ಮಿಡಿದ ಹೃದಯಗಳ ಕಂಬನಿಯ ಸ್ಪರ್ಶವಿರದೆ
ಸೇರುತ್ತಿವೆ ಸಹಸ್ರಾರು ಶವಗಳ ಸಾಲು
ರುದ್ರಭೂಮಿಯ ತಳವ
ಅರಿವಿಲ್ಲದ ಯಮನ ಪಾಶದ ತುದಿಯ ಕಣವು
ನಮ್ಮ ಶ್ವಾಸವ ಸೇರುವ ಮುನ್ನ
ಸಿದ್ಧರಾಗಿರಿ ಇಂದು ಗೃಹ ದಿಗ್ಬಂಧನದಡಿ
ಅಂತರದ ಸುರಕ್ಷತೆಯ ಸ್ವಾರ್ಥದ ಬದುಕಿನೆಡೆಗೆ
ಈ ಸಮಯ ಕಳೆಯಲು ಸಾಕ್ಷಿಯಾಗಿದೆ ನಮಗೆ
ಮಾಹಿತಿ ಒದಗಿಸಒ ಆನ್ಲೈನ್ ಕಾರ್ಯಾಗಾರದ ಕೊಡುಗೆ
ಪುಟ್ಟ ಸಭೆಯಲ್ಲಿ ನೀವ್ ಮಿಂಚುವ ಸಂಚನು ಮರೆತು
ವೈರಸ್ ತೊಲಗಿಸುವ ಬನ್ನಿ ನೊಂದ ಜೀವಕ್ಕೆ ಸಹಾಯ ಹಸ್ತವ ನೀಡಿ ತ್ಯಾಗ ಸೇವೆಯ ಸಿರಿಯಾಗಿ

- nagamani Kanaka

10 May 2021, 08:00 pm
Download App from Playstore: