ಸೈನಿಕ ನಮ್ಮ ದೇಶದ ರಕ್ಷಕ

ಅಮ್ಮನ ಮಡಿಲಲಿ ಕಂತ್ತೆರೇವ ಮೊದಲೇ
ಭಗವದ್ಗೀತೆಯ ಸಾರವ ಅರಿತು ಬಂದ ಮುದ್ದು ಕುವರ
ಅವ ಸ್ಪಟಿಕದಂತೆ ನುಡಿಯುತ್ತಿದ್ದ
ಭಾರತಾಂಬೆಯ ಭಕ್ತಿಸಾರ
ವಿದ್ಯೆಯ ಜೊತೆಗೆ ಕಲಿತ ಶತ್ರುಗಳ ಸಂಹರಿಸುವ ಪಾಠ
ಪ್ರಚೋದನೆ ನೀಡಿತು ಮನಕೆ ವೀರ ಯೋಧರ
ದೇಶ ರಕ್ಷಣೆಯ ಕಥೆಗಳ ಸಾಕ್ಷಿಯ ಸಂಪುಟ
ಅವಕಾಶ ದೊರೆಯಿತು ಗಡಿ ತೀರವ ಕಾಯುವ ಹುದ್ದೆಗೆ
ಆಗ ತನ್ನ ಕುಟುಂಬವ ತ್ಯಜಿಸಿ ನಡೆದ ಯುವಕ
ಹಿಮಾಲಯ ಪರ್ವತದೆಡೆಗೆ
ತನ್ನ ರಕ್ಷಣೆ ಭಾರವ ಬೆನ್ನಲಿ ಹೊತ್ತು
ವೈರಿಗಳ ಗುಡುಗ ಅಡಗಿಸುವ ಮುತ್ತು
ನಿದ್ರಿಸಲು ಬಯಸುವುದೆ ಶಯನ ಗೃಹವ
ಪಾಪ ಕರ್ಮವ ಎಸಗಿ ದೇಶ ದ್ರೋಹದಿ ಮುಳುಗಿ ನಾವ್ ಮರೆಯಬಹುದೇ
ಮೇಣದಂತೆ ಸವೆಯುತ್ತಿರೊ ಸೈನಿಕರ ಜೀವನವ
ತಾಯ್ನಾಡ ಉಳಿವಿಗೆ ಹೆಬ್ಬಂಡೆಯಂತೆ ಕಾವಲಿರುವ ಶೂರರಿಗೆ ಪ್ರತಿದಿನವೂ ಸೇರಬೇಕು ನಮ್ಮ ಕೋಟಿ ಕೋಟಿ ನಮನ
ಎದುರಾಳಿ ಗುಂಡಿಗೆ ಬಲಿಯಾದ ವೀರ ಯೋಧರ ಕಥನ
ಮಕ್ಕಳ್ ಎದೆಯಲ್ಲಿ ಮೂಡಿಸಬೇಕು ಸದಾ
ಸೃಜನಶೀಲ ಚಿಂತನೆಯ ದೇಶಾಭಿಮಾನ.

- nagamani Kanaka

12 May 2021, 10:05 pm
Download App from Playstore: