ಪ್ರೀತಿಯ ಕನಸು
ಕಣ್ಣಾರೆ ನಾ ಕಂಡ ಕನಸು ನನಸಾಗೊ ಮೊದಲೇ ಕನಸಾಗೆ ಕಣ್ ಸೇರಿತು ಹೃದಯದ ಪ್ರೀತಿ ಹೂವಾಗಿ ಅರಳುವ ಮೊದಲೇ ಮೊಗ್ಗಾಗೆ ಹೃದಯ ಸೇರಿತು...... ನನಸಾಗದೆ ಉಳಿದ ಕನಸು ಮುದ್ದಾದ ಹೃದಯ ಸೇರಿದೆ ಮೊಗ್ಗಾಗಿಯೆ ಉಳಿದ ಪ್ರೀತಿ ಕಣ್ಣ ಕಂಬನಿಯಾಗಿ ಹರಿದಿದೆ....... ಅಂದು ನಾ ಕಂಡ ಕನಸು ಇಂದು ಹೃದಯವನು ಕೊಲ್ಲುತಿದೆ ಅಂದು ಫಲಿಸದ ಚೆಂದದ ಪ್ರೀತಿ ಕಣ್ಣ ಕಂಬನಿಯ ಚೆಲ್ಲುತಿದೆ...... ನಾ ಕಂಡ ಪ್ರೀತಿ ಕನಸುಗಳ ಪಯಣ ಕೊನೆಯಾಗುವುದಿಲ್ಲ ಈ ಕ್ಷಣ ನನ್ನ ಹೃದಯ ಬಡಿತ ನಿಂತ ಆ ಕ್ಷಣ ಮಣ್ಣ ಸೇರುವುದು ಪ್ರೀತಿ ಕನಸುಗಳ ಪಯಣ........
- madhu
13 May 2021, 08:02 pm
Download App from Playstore: