ಮುದ್ದು ಹುಡುಗ
ಈ ಮನಸ ಕದ್ದವನು ನನ್ನ ಪ್ರೀತಿಯ ಮುದ್ದಿವನು ಈ ಬಾಳಿನ ಕನಸಿವನು ಕನ್ನೋಟದಲ್ಲೆ ಸೆಳೆದವನು.....ಪ್ರೀತಿಯಿಂದ ಚಿನ್ನು ಎಂದು ಕರೆಯುವನು ದಿನ ಫೋನಿನಲ್ಲೇ ಗಂಟೆಗಟ್ಟಲೆ ಮಾತಾಡುವನು ನನ್ನ ಆಲಿಂಗನಕ್ಕಾಗಿ ತುದಿಗಾಲಲ್ಲಿ ಕಾಯುತಿರುವನು ನನ್ನ ಕಾಣದೆ ವರ್ಷಗಳೇ ಕಲೆಯುತಿರುವನು.....ನನ್ನ ಉಸಿರಲಿ ಬೆರೆತು ಹೋಗಿರುವ ಈ ಹೃದಯದ ಬಡಿತವಿವನು ನಿದ್ದೆಯಲ್ಲೂ ನನ್ನ ಕಾಡುವವನು ಈ ಮನದ ತುಡಿತವಿವನು.....ಅವನ ಹೃದಯದಲಿ ತೆರೆದಿರುವ ಪ್ರೀತಿಯ ಖಾತೆ ಆದರೂ ಪ್ರತಿನಿತ್ಯ ಜಗಳವಾಡುವನು ನನ್ನಯ ಜೊತೆ ಕೆಲವೊಮ್ಮೆ ಅತಿರೇಖವಾದ ನಮ್ಮೀ ಜಗಳ ಕೆಲವೊಮ್ಮೆ ಹರಿಸುವುದು ಕಣ್ಣ ಹನಿಗಳ.... ಮೂಗಿನ ತುದಿಯಲ್ಲೇ ಸಿಟ್ಟು ಕ್ಷಣ ಕೂಡ ಇರಲಾರ ನನ್ನ ಬಿಟ್ಟು ತನ್ನದೇ ಸರಿ ಎನ್ನುವ ನಮ್ಮ ವಾದ ಕೆಲವೊಮ್ಮೆ ಸೃಷ್ಟಿಸುವುದು ವಿವಾದ..... ಇಬ್ಬರ ಮನೆಯಲ್ಲೂ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ ಆದರೂ ಅವನನ್ನು ಬಿಡಲು ನನಗೆ ಮನಸಿಲ್ಲ ಹೇಗಾದರೂ ಮಾಡಿ ಒಪ್ಪಿಸಬಹುದು ಅವರನ್ನು ಆ ನಂಬಿಕೆಯಿಂದಲೇ ಅವನ ನೆನೆಯುತಿರುವೆನು.....ಭೂಮಿ-ಆಕಾಶ ಒಂದಾಗುವುದಿಲ್ಲ ಮುದ್ದು-ಚಿನ್ನು ಒಂದಾಗಬಹುದಲ್ಲ ಆ ಆಸೆಯಿಂದ ದಿನ ಕಲೆಯುತಿರುವೆನು ಅವ ಸಿಗಬಹುದೇನೋ ಎಂದು ಕಾಯುತಿರುವೆನು......ಬಲ್ಲವರಾರು ದೇವರ ಆಟವನು ಕೊನೆಗೊಂದು ದಿನ ಸಿಕ್ಕರೂ ಸಿಗಬಹುದವನು ಈ ಪ್ರೀತಿ ಕೊನೆವರೆಗೂ ಉಳಿವುದೋ? ಕಡಲ ಅಂಚಲ್ಲೆ ತೇಲಿ ಹೋಗುವುದೋ ?
- madhu
14 May 2021, 02:52 pm
Download App from Playstore: