ಮಳೆ
ಇಳೆಯು ತುಂಬಿ ಹಸಿರಾಗಿತ್ತು,
ಕೋಗಿಲೆಯ ಕುಹು ಕುಹು ಗಾನ!
ನಮ್ಮ ಒಲವು ಹಿರಿದಾಗಿತ್ತು,
ದನಕರುಗಳ ಸಮ್ಮೇಳನ!
ಅಂದು ಬಂತು ಧಾರಕಾರ ಮಳೆ,
ಪಕ್ಷಿಗಳು ಸೇರಿಕೊಂಡವು ಗೂಡು!
ನೀರಿನಿಂದ ತುಂಬಿದ ಹೊಳೆ,
ಆಣೆಕಲ್ಲುಗಳ ಹೊಸ ಹಾಡು!!
ಒಂದೊಮ್ಮೆ ಸುರಿದ ಹಾಹಾಕಾರ,
ಎಲ್ಲವು ತಂಪಾಯಿತು!
ಮೋಡ ಮುಸುಕಿದ ಪ್ರಭಾಕರ,
ಧರೆಗೆ ಇಂಪಾಯಿತು!!
ಶಾಂತವಾಯಿತು ಒಮ್ಮಿದೊಮ್ಮೆಲೆ,
ಟಿಪ್ ಟಿಪ್ ಟಿಪ್ ಎಂಬ ಶಬ್ದ!
ಮರಗಳು ಝಾಡಿಸಿದವು ಎಲೆ,
ರೆಂಬೆ ಕೊಂಬೆಗಳು ಮತ್ತೆ ಸ್ತಬ್ದ!!
ಮತ್ತೆ ಬೀಸಿತು ಘಾಳಿ,
ಗುಡುಗು ಮಿಂಚಿನ ಸಂಚು!
ಅತಿವೃಷ್ಟಿಯ ಹಾವಳಿ,
ನೆಲದಲ್ಲಿ ಉಕ್ಕಿತು ಕಿಚ್ಚು!!
ಶಾಂತವಾಗಲಿ ಈ ರಭಸ,
ಸ್ಥಗಿತವಾಗಲಿ ಪ್ರವಾಹ!
ಬೇಸಿಗೆಯಲ್ಲಿ ವಿರಸ,
ತೀರಿತು ನಮ್ಮ್ ದಾಹ!!
- ಶ್ರೀಹರಿ
- Srihari Managoli
16 May 2021, 04:21 pm
Download App from Playstore: