ನಾನೂ ಅಮೇರಿಕನ್

ನಾನೂ ಅಮೆರಿಕಾ ಕುರಿತೇ ಹಾಡುತ್ತೇನೆ
ಈ ನೆಲದ ಕಪ್ಪು ಸೋದರ ನಾನು
ಜತೆಗಾರರೆಲ್ಲ ನನ್ನನ್ನು
ಅಡಿಗೆ ಮನೆಯೊಳಗೇ ಊಟಮಾಡಲು ತಳ್ಳುತ್ತಾರೆ
ನಾನು ನಗುತ್ತಲೇ
ಚೆನ್ನಾಗಿ ಉಂಡು
ಬಲಿಷ್ಠವಾಗಿ ಬೆಳೆವೆ

ನಾಳೆ
ಜತೆಗಾರರು ಬಂದಾಗ
ಊಟಕ್ಕೆ ಟೇಬಲ್ಲನ್ನೇ ಬಳಸುವೆ
ಆಗ
ಯಾರೂ ನನಗೆ
ಅಡಿಗೆ ಮನೆಯಲ್ಲಿ ಊಟಮಾಡೆಂದು
ಹೇಳುವ ಧೈರ್ಯ ತೋರಲಾರರು

ಅಲ್ಲದೆ
ನಾನೆಷ್ಟು ಸುಂದರ ಎಂಬುದು ಅವರಿಗೆ ತಿಳಿಯುತ್ತದೆ
ಅವಮಾನದಿಂದ ಅವರು ತಲೆ ತಗ್ಗಿಸಿಬಹುದು
ನಾನೂ ಸಹ ಅಮೆರಿಕನ್


ಇಂಗ್ಲೀಷ್ ಮೂಲ - ಲಾಂಗ್ಸ್ಟನ್ ಹ್ಯೂಸ್.
ಅನುವಾದ - ನಚಿಕೇತ ವಕ್ಕುಂದ.























- Nachiketh Okkunda

24 May 2021, 03:53 am
Download App from Playstore: